ಕರ್ನಾಟಕ

karnataka

ETV Bharat / state

ಬಿಎಸ್‌ಸಿ ಪದವಿ ಓದುವಾಗಲೇ ಈ ಬುದ್ಧಿನಾ.. ಟ್ರಿಪ್‌ಗೆ ಹೋಗುವ ಶೋಕಿಗಾಗಿ ಹೀಗಾ ಮಾಡೋದು? - thief arrest in bengalore by police

ಮಂಡ್ಯದ ತನ್ನ ಅಕ್ಕನ ಮನೆಗೆ ಹೋಗಿದ್ದ ಕಾರ್ತಿಕ್, ಬರುವಾಗ ಬೈಕ್‌ವೊಂದನ್ನ ಕಳ್ಳತನ ಮಾಡ್ಕೊಂಡು ಬಂದಿದ್ದ. ಅದೇ ಬೈಕ್‌ನಲ್ಲಿ ಮಹಿಳೆಯರನ್ನ ಅಡ್ಡಹಾಕಿ ಸುಲಿಗೆ ಮಾಡುತ್ತಿದ್ದ. ಕಳೆದೆರಡು ವರ್ಷಗಳ ಹಿಂದೆ ಬೈಕ್, ಮನೆಗಳ್ಳತನ ಪ್ರಕರಣದ ಸಂಬಂಧ ಕೆಂಪೇಗೌಡ ಪೊಲೀಸರ ಅತಿಥಿ ಸಹ ಆಗಿದ್ದ. ಸದ್ಯ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ.

thief-arrest-in-bengalore-by-police
ಕಾರ್ತಿಕ್

By

Published : Jan 24, 2020, 7:33 PM IST

ಬೆಂಗಳೂರು: ಬಿಎಸಸಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ. ಮನೆ, ಕಾಲೇಜ್ ಅಂತಾ ಇದ್ದಿದ್ರೆ ಇವತ್ತು ನೆಮ್ಮದಿಯಾಗಿರ್ತಿದ್ದ. ಆದರೆ, ಟ್ರಿಪ್‌ಗೆ ಹೋಗುವ ಶೋಕಿಗೆ ಬಿದ್ದು ಮಹಿಳೆಯ ಬ್ಯಾಗ್‌ ಕದ್ದು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ವೇಳೆ ಮಹಿಳೆಯ ಕೈಯಲ್ಲಿದ್ದ ಪರ್ಸ್‌ ಕಿತ್ತು ಪರಾರಿಯಾಗಿದ್ದ ಆರೋಪಿ ಕಾರ್ತಿಕ್​ ಎಂಬಾತನನ್ನ ಜಯನಗರದ ಪೊಲೀಸರು ಬಂಧಿಸಿದ್ದಾರೆ.

ರೋಹಿಣಿ ಕಟೋಚ್ ಸೆಪೆಟ್, ಡಿಸಿಪಿ, ದಕ್ಷಿಣ ವಿಭಾಗ..

ಕಾರ್ತಿಕ್‌ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಚ್ಚರಿಯ ಮಾಹಿತಿ ಬಯಲಾಗಿದೆ. ಖಾಸಗಿ ಕಾಲೇಜ್‌ವೊಂದರಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಆರೋಪಿಗೆ ಫ್ರೆಂಡ್ಸ್ ಜೊತೆ ಟ್ರಿಪ್ ಹೋಗುವ ಶೋಕಿ ಇತ್ತು. ಹೀಗಾಗಿ ಮನೆಯಲ್ಲಿ ಹಣಕೊಡದೆ ಇದ್ದಾಗ ಈ ರೀತಿ ಅಡ್ಡ ದಾರಿ ಹಿಡಿದಿದ್ದ.ಅಷ್ಟೇ ಅಲ್ಲ,ಕಾರ್ತಿಕ್ ಎಕ್ಸಾಂನಲ್ಲಿ ಫೇಲ್‌ ಆಗಿದ್ದ. ಹಾಗಾಗಿ ಮನೆಯಲ್ಲಿ ತಂದೆ ಪಾಕೆಟ್ ಮನಿ ಕೊಡುವುದನ್ನೇ ನಿಲ್ಲಿಸಿದ್ರಂತೆ. ಇದರಿಂದ ರೋಸಿ ಹೋಗಿದ್ದ ಆರೋಪಿ ಬೈಕ್ ಕಳ್ಳತನ ಹಾಗೂ ಸುಲಿಗೆ ಮಾಡಲು ನಿಂತಿದ್ದ.

ಮಂಡ್ಯದ ತನ್ನ ಅಕ್ಕನ ಮನೆಗೆ ಹೋಗಿದ್ದ ಕಾರ್ತಿಕ್, ಬರುವಾಗ ಬೈಕ್‌ವೊಂದನ್ನ ಕಳ್ಳತನ ಮಾಡ್ಕೊಂಡು ಬಂದಿದ್ದ. ಅದೇ ಬೈಕ್‌ನಲ್ಲಿ ಮಹಿಳೆಯರನ್ನ ಅಡ್ಡಹಾಕಿ ಸುಲಿಗೆ ಮಾಡುತ್ತಿದ್ದ. ಕಳೆದೆರಡು ವರ್ಷಗಳ ಹಿಂದೆ ಬೈಕ್, ಮನೆಗಳ್ಳತನ ಪ್ರಕರಣದ ಸಂಬಂಧ ಕೆಂಪೇಗೌಡ ಪೊಲೀಸರ ಅತಿಥಿ ಸಹ ಆಗಿದ್ದ. ಸದ್ಯ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ.

ABOUT THE AUTHOR

...view details