ಕರ್ನಾಟಕ

karnataka

ETV Bharat / state

ಎಲ್ಲಾ ಅಧಿಕಾರವೂ ತಮಗೇ ಬೇಕು ಅಂತಾರೆ... ಸ್ಪೀಕರ್​​​ ಹೀಗೆ ಹೇಳಿದ್ದು ಯಾರ ಬಗ್ಗೆ? - undefined

ಗ್ರಾಮ ಪಂಚಾಯತಿಯಿಂದ ಹಿಡಿದು ವಿಧಾನಸೌಧದವರೆಗೂ ಎಲ್ಲಾ ಅಧಿಕಾರ ತಮ್ಮ ಕುಟುಂಬಕ್ಕೆ ಬೇಕು ಅಂತಾರೆ. ಸರ್ಕಾರದಲ್ಲಿ ಇರುವ ಕೆಲಸಗಳೆಲ್ಲ ಇವರಿಗೆ ಬೇಕು. ರಾಷ್ಟ್ರಮಟ್ಟದ ಕ್ರೀಡೆಯಲ್ಲೂ ಇವರಿಗೆ ಸ್ಥಾನ ಬೇಕು ಎಂದರೆ ಜನಸಾಮಾನ್ಯರು ಏನಾಗಬೇಕು? ಹೀಗಂತಾ ಹೇಳಿದ್ದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್.

ಸ್ಪೀಕರ್

By

Published : May 28, 2019, 4:34 AM IST

Updated : May 28, 2019, 11:54 AM IST

ಬೆಂಗಳೂರು:ಗ್ರಾಮ ಪಂಚಾಯತಿಯಿಂದ ಹಿಡಿದು ವಿಧಾನಸೌಧದವರೆಗೂ ಎಲ್ಲಾ ಅಧಿಕಾರ ತಮ್ಮ ಕುಟುಂಬಕ್ಕೆ ಬೇಕು ಅಂತಾರೆ. ಸರ್ಕಾರದಲ್ಲಿ ಇರುವ ಕೆಲಸಗಳೆಲ್ಲ ಇವರಿಗೆ ಬೇಕು. ರಾಷ್ಟ್ರಮಟ್ಟದ ಕ್ರೀಡೆಯಲ್ಲೂ ಇವರಿಗೆ ಸ್ಥಾನ ಬೇಕು ಎಂದರೆ ಜನಸಾಮಾನ್ಯರು ಏನಾಗಬೇಕು? ಹೀಗಂತಾ ಹೇಳಿದ್ದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್.

ರಾಜ್ಯ ರಾಜಕಾರಣದ ಇಂದಿನ ಪರಿಸ್ಥಿತಿಗೆ ಈ ಮಾತುಗಳು ಕಾರಣವಾಗಿವೆ. ಸ್ಪೀಕರ್​ ಅವರು ನೇರವಾಗಿ ಯಾರ ಹೆಸರು ಹೇಳದೆ ಬೇಸರ ವ್ಯಕ್ತಪಡಿದರು. ಹಿರಿಯ ಪತ್ರಕರ್ತ ರಾಮಚಂದ್ರ ಅವರು ಬರೆದ “ಕಾಕ್​ಪಿಟ್ ಆಫ್ ಇಂಡಿಯಾಸ್ ಪೊಲಿಟಿಕಲ್ ಬ್ಯಾಟಲ್ಸ್” ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಮೇಶ್ ಕುಮಾರ್, ಇವತ್ತಿನ ರಾಜಕಾರಣದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದರು.

ಸ್ಪೀಕರ್ ರಮೇಶ್ ಕುಮಾರ್

ಜಯನಗರದಲ್ಲಿರುವ ರಾಮಚಂದ್ರ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಕುಮಾರ್, ಜನರು ಹಣ ಪಡೆದು ಮತ ಚಲಾಯಿಸುವುದು ಇವತ್ತಿನ ರಾಜಕಾರಣ ಕೆಡಲು ಕಾರಣ ಎಂಬ ವಾದವನ್ನು ತಳ್ಳಿಹಾಕಿದರು. ಇಂದು ರಾಜಕಾರಣ ಕೆಟ್ಟು ಹೋಗಿದೆಯೇ ಹೊರತು ಜನರು ಕೆಟ್ಟು ಹೋಗಿಲ್ಲ. ನಮ್ಮ ಬಳಿ ಹೆಚ್ಚು ಹಣ ಇದೆ ಅಂತ ನೀವೇ ಕೊಡುತ್ತೀರಾ. ನಮ್ಮ ಮನೆಯಲ್ಲಿ ಇಷ್ಟು ಮತಗಳಿವೆ. ಇಷ್ಟು ದುಡ್ಡು ಕೊಡಬೇಕೆಂದು ಜನರು ಕೇಳಲ್ಲ. ಆದರೆ, ನೀವೇ ಬಲವಂತ ಮಾಡಿ ಹಣ ಕೊಟ್ಟಾಗ ಅವರು ಅದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ಸ್ಪೀಕರ್ ರಮೇಶ್ ಕುಮಾರ್ ಕೇಳಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ವ್ಯಕ್ತವಾದ ಫಲಿತಾಂಶವು ಕ್ರಿಮಿನಲ್ ಕಾನ್ಫಿರೆಸಿಯನ್ನು ಸೂಚಿಸುತ್ತದೆ. ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಎದುರಿಸಿದ ಲೋಕಸಭಾ ಚುನಾವಣೆಯಲ್ಲಿ ನಾವು ಮೂರನೇ ಸ್ಥಾನಕ್ಕೆ ಬಂದಿದ್ದೆವು. ಆವತ್ತು ಕೆಲವರು ಸ್ಥಾನಮಾನ ಸಿಕ್ಕಿಲ್ಲವೆಂದು ಚುನಾವಣೆಯಲ್ಲಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದರು. ಇವತ್ತು ಒಂದೇ ಸ್ಥಾನ ಗೆದ್ದಿದ್ದೇವೆ ಎಂದು ರಮೇಶ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಒಳಗೊಳಗೆ ಸಂಚು ನಡೆದಿರಬಹುದೆಂದು ಪರೋಕ್ಷವಾಗಿ ಶಂಕಿಸಿದರು.

ಶಿಕ್ಷಣದ ಕೊರತೆಯಿಂದ ಚುನಾವಣಾ ಭ್ರಷ್ಟಾಚಾರ ಹೆಚ್ಚಿದೆ ಎಂಬ ವಾದವನ್ನೂ ತಳ್ಳಿಹಾಕಿದ ಅವರು, ಅತ್ಯಂತ ಹೆಚ್ಚು ಭ್ರಷ್ಟಾಚಾರಕ್ಕೆ ಒಳಗಾಗಿರುವುದು ಶಿಕ್ಷಣ ಪಡೆದವರೇ ಆಗಿದ್ದಾರೆ. ಐಎಎಸ್ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಬೆಂಗಳೂರಲ್ಲಿ ಶೇ. 50ರಷ್ಟು ಜನರು ಈ ಬಾರಿ ಮತ ಹಾಕಿಲ್ಲ. ಹೀಗಿರುವಾಗ, ಇದು ಆಗಿಲ್ಲ, ಅದು ಆಗಿಲ್ಲ ಎಂದು ದೂರುತ್ತಾರೆ. ಮತ ಹಾಕದ ನಿಮಗೆ ಇದರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ರಾಜಕೀಯ ವ್ಯವಸ್ಥೆ ಬಗ್ಗೆ ಬೆಂಗಳೂರಿಗರು ಮತ್ತು ವಿದ್ಯಾವಂತರು ಅಸಮಾಧಾನಗೊಂಡಿದ್ದಾರೆ ಎಂಬ ಅಭಿಪ್ರಾಯವನ್ನೂ ಅವರು ಟೀಕಿಸಿದರು.

ಜನರು ಜಾತಿ ನೋಡಿ ಮತ ಹಾಕುತ್ತಾರೆಂಬ ಮಾತನ್ನೂ ರಮೇಶ್ ಕುಮಾರ್ ತಳ್ಳಿಹಾಕಿದರು. ನಾನು 10 ಚುನಾವಣೆ ಎದುರಿಸಿದ್ದೇನೆ. ಆರರಲ್ಲಿ ಗೆದ್ದಿದ್ದೇನೆ. ನಾಲ್ಕನ್ನು ಸೋತಿದ್ದೇನೆ. ನಾನೊಬ್ಬ ಬ್ರಾಹ್ಮಣ. ನಮ್ಮ ಶ್ರೀನಿವಾಸಪುರದಲ್ಲಿ ಬ್ರಾಹ್ಮಣರ ಸಾವಿರ ಮತಗಳು ಬರಬಹುದು. ಆದರೂ ಕೂಡ ನಾನು ಚುನಾವಣೆ ಗೆದ್ದೂ ಇದ್ದೇನೆ. ಸೋತೂ ಇದ್ದೇನೆ ಎಂದು ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

Last Updated : May 28, 2019, 11:54 AM IST

For All Latest Updates

TAGGED:

ABOUT THE AUTHOR

...view details