ಕರ್ನಾಟಕ

karnataka

ETV Bharat / state

ಕಷ್ಟದಲ್ಲಿರುವ ಸಂತ್ರಸ್ತೆಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ : ಮಹ್ಮದ್ ನಲಪಾಡ್ - -woman-in-distress-mohammed-nalapad

ವಿಶೇಷ ಕೋರ್ಟ್ ಬಳಿ ಬಂದ ಸಂದರ್ಭದಲ್ಲಿ ಯುವತಿ ಪರ ವಕೀಲರು ನನ್ನ ಬಳಿ ಬಂದು ನಮಗೆ ಹೋಗಿಬರಲು ವಾಹನ ಬೇಕು ಎಂದು ಕೇಳಿದರು. ನನ್ನ ಸ್ನೇಹಿತನ ಕಾರು ಹಾಗೂ ಚಾಲಕನನ್ನು ಕಳುಹಿಸಿಕೊಟ್ಟೆ..

ನಲಪಾಡ್
ನಲಪಾಡ್

By

Published : Mar 31, 2021, 11:00 PM IST

ಬೆಂಗಳೂರು : ಕಷ್ಟದಲ್ಲಿರುವ ಮಹಿಳೆಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ‌. ಇದು ನನ್ನ ನೈತಿಕ ಜವಾಬ್ದಾರಿ. ಮುಂದಿನ ದಿನಗಳಲ್ಲೂ ಸಹಾಯ ಮಾಡುವುದಾಗಿ ಕಾಂಗ್ರೆಸ್‌ ಶಾಸಕ ಎನ್ ಎ‌ ಹ್ಯಾರಿಸ್ ಪುತ್ರ ಮಹ್ಮದ್ ನಲಪಾಡ್, ಸಿಡಿ ಪ್ರಕರಣದ ಯುವತಿಗೆ ವಾಹನ ವ್ಯವಸ್ಥೆ ಮಾಡಿದ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ನಲಪಾಡ್, ಯುವತಿಗೆ ವಾಹನ ವ್ಯವಸ್ಥೆ ಮಾಡಿದ ವಿಚಾರದಲ್ಲಿ ಯಾವುದೇ ತಪ್ಪು ಕಾಣಲಿಲ್ಲ. ಯಾವುದೇ ಉದ್ದೇಶವೂ ಇಲ್ಲ. ನನಗೂ, ಯುವತಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಹೇಳಿದರು.

ನಾನು ಮತ್ತು ನನ್ನ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳಾ ಕಾಂಗ್ರೆಸ್ ಸದಸ್ಯರು ನ್ಯಾಯಾಲಯದ ಬಳಿ ನಿನ್ನೆ ಬಂದಿದ್ದೆವು. ಯುವತಿಗೆ ಸುರಕ್ಷತೆ ಬೇಕೆನ್ನುವುದು ನಮ್ಮೆಲ್ಲರ ಒತ್ತಾಯವಾಗಿತ್ತು.

ವಿಶೇಷ ಕೋರ್ಟ್ ಬಳಿ ಬಂದ ಸಂದರ್ಭದಲ್ಲಿ ಯುವತಿ ಪರ ವಕೀಲರು ನನ್ನ ಬಳಿ ಬಂದು ನಮಗೆ ಹೋಗಿಬರಲು ವಾಹನ ಬೇಕು ಎಂದು ಕೇಳಿದರು. ನನ್ನ ಸ್ನೇಹಿತನ ಕಾರು ಹಾಗೂ ಚಾಲಕನನ್ನು ಕಳುಹಿಸಿಕೊಟ್ಟೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ..ತ್ರಿವರ್ಣ ಧ್ವಜಕ್ಕೆ ಇಂದಿಗೆ 100 ವರ್ಷ.. ಹೀಗಿತ್ತು ಬಾವುಟದ ತಯಾರಿ..

ABOUT THE AUTHOR

...view details