ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಕಾನೂನು ಪದವಿ ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ತೃತೀಯ ಲಿಂಗಿಗಳಿಗೆ) ಮೀಸಲಾತಿ ನೀಡದಿರಲು ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಯು) ಕರ್ನಾಟಕ ರಾಜ್ಯ ಹೈಕೋರ್ಟ್‌ಗೆ ತಿಳಿಸಿದೆ.
ತಮಗೆ ಕಾನೂನು ಪದವಿ ಪ್ರವೇಶ ನಿರಾಕರಿಸಿರುವ ಎನ್‌ಎಲ್‌ಎಸ್‌ಯು ಕ್ರಮವನ್ನು ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಯಾದ ಮುಗಿಲ್ ಅನ್ಬು ವಸಂತ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಹೀಗೆ ತಿಳಿಸಿದೆ. ಎನ್‌ಎಲ್‌ಎಸ್‌ಯು ಮೀಸಲಾತಿ ಪ್ರಕಾರ, ಪರಿಶಿಷ್ಟ ಜಾತಿಯವರೆಗೆ ಶೇ.15 ರಷ್ಟು, ಪರಿಶಿಷ್ಟ ಪಂಗಂಡದವರಿಗೆ ಶೇ. 705 ರಷ್ಟು, ಹಿಂದುಳಿದ ವರ್ಗದವರಿಗೆ ಶೇ. 27 ರಷ್ಟು, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಹಾಗೂ ಶೇಕಡಾ 5 ರಷ್ಟು ವಿಕಲಚೇತನರಿಗೆ, ಶೇಕಡಾ 30 ರಷ್ಟು ಮಹಿಳೆಯರಿಗೆ ಮತ್ತು ಶೇ.25 ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಹೀಗಾಗಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸದಿರಲು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಅಲ್ಲದೇ, ಮೀಸಲಾತಿ ಸೂಚಿಸುವುದು ಮತ್ತು ಅನುಷ್ಠಾನಗೊಳಿಸುವುದು ವಿಶ್ವ ವಿದ್ಯಾನಿಲಯದ ಪರಾಮಾಧಿಕಾರ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ತಿಳಿಸಿದೆ ಎಂದು ಆಕ್ಷೇಪಣೆಯಲ್ಲಿ ವಿವರಣೆಯನ್ನು ನೀಡಲಾಗಿದೆ.
ಇದನ್ನೂ ಓದಿ :ಪಿಹೆಚ್ಡಿ ಮಾಡುತ್ತಿದ್ದಾರೆ 'ರಾಜ್ಯದ ಮೊದಲ ತೃತೀಯ ಲಿಂಗಿ': ತನ್ನವರ ಬಗ್ಗೆಯೇ ಸಂಶೋಧನೆ!