ಕರ್ನಾಟಕ

karnataka

ETV Bharat / state

ಆನ್‌ಲೈನ್ ಮೂಲಕ ಮದ್ಯ ಮಾರಾಟ ಪ್ರಸ್ತಾಪ ಇಲ್ಲ, ಕ್ಷಮಿಸಿ: ಸಚಿವ ಎಚ್‌. ನಾಗೇಶ್ - minister Nagesh press meet

ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ‌ ಅಬಕಾರಿ ಸಚಿವ ನಾಗೇಶ್, ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ. ನಿನ್ನೆ ನನಗೆ ಸ್ವಲ್ಪ ಮಾಹಿತಿ ಕೊರತೆ ಇತ್ತು. ಅದ್ದರಿಂದ ತಪ್ಪಾಗಿದೆ ನನ್ನನ್ನು ಕ್ಷಮಿಸಿ. ಮಹಿಳೆಯರ ಬಗ್ಗೆ ನಮಗೆ ಅಪಾರ ಅಭಿಮಾನ ಇದೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.

ಅಬಕಾರಿ ಸಚಿವ ನಾಗೇಶ್

By

Published : Sep 5, 2019, 2:30 PM IST

ಬೆಂಗಳೂರು : ಆನ್‌ಲೈನ್ ಮೂಲಕ ಮನೆ‌ಮನೆಗೆ ಮದ್ಯ ಮಾರಾಟ ಮಾಡುವ ಯಾವುದೇ ಪ್ರಸ್ತಾಪ‌ ಇಲ್ಲ ಎಂದು ಅಬಕಾರಿ ಸಚಿವ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ‌ ಅವರು, ಆನ್ ಲೈನ್​ನಲ್ಲಿ ಮದ್ಯ ಮಾರಾಟ ವ್ಯವಸ್ಥೆ ಜಾರಿ ಮಾಡುವುದಿಲ್ಲ. ಗುಜರಾತ್ ಹಾಗು ಮಹಾರಾಷ್ಟ್ರದಲ್ಲಿ ಆನ್‌ಲೈನ್ ವ್ಯವಸ್ಥೆ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ಕೊಟ್ಟೆ ಅಷ್ಟೇ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್ ಲೈನ್ ಮೂಲಕ ಮದ್ಯ ಮಾರಾಟ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

ಅಬಕಾರಿ ಸಚಿವ ನಾಗೇಶ್ ಸುದ್ದಿಗೋಷ್ಠಿ

ನಿನ್ನೆ ನನಗೆ ಸ್ವಲ್ಪ ಮಾಹಿತಿ ಕೊರತೆ ಇತ್ತು. ಅದ್ದರಿಂದ ತಪ್ಪಾಗಿದೆ ನನ್ನನ್ನು ಕ್ಷಮಿಸಿ. ಮಹಿಳೆಯರ ಬಗ್ಗೆ ನಮಗೆ ಅಪಾರ ಅಭಿಮಾನ ಇದೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ‌. ನಾನು ಮಾತನಾಡುವಾಗ ಮಾಹಿತಿ ಕೊರತೆ ಇತ್ತು. ತಪ್ಪಾಗಿ ಮಾತನಾಡಿದ್ದೇನೆ ಕ್ಷಮೆ ಇರಲಿ ಎಂದು ತಿಳಿಸಿದರು.

ಈ ಸಂಬಂಧ ಯಾವ ಆದೇಶವೂ ಹೊರಡಿಸಿಲ್ಲ. ಇದು ಸಭೆಯಲ್ಲಿ ಚರ್ಚೆ ಆಗಿತ್ತಷ್ಟೆ. ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ನೋವಾಗಿದ್ದರೆ, ನಾನು ಅವರಲ್ಲಿ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.

ತಾಂಡಾಗಳಲ್ಲಿ ಕಳ್ಳಬಟ್ಟಿ ತಡೆಗೆ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಸಂಚಾರಿ‌ ವಾಹನಗಳ ಮೂಲಕ ಮದ್ಯ ಮಾರಾಟ ಕೇವಲ‌ ಪ್ರಸ್ತಾಪ ಅಷ್ಟೇ. ಅದ್ಯಾವುದೇ ಪ್ರಸ್ತಾವನೆಗಳು ಇರಲಿ ಸಿಎಂ ಗಮನಕ್ಕೆ ತಂದು ಜಾರಿಗೆ ತರಬೇಕಾಗುತ್ತದೆ. ನಾನು ನನ್ನ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details