ಬೆಂಗಳೂರು: ಕಿಡ್ನಿ ಕಸಿ ಮಾಡಲು ಈ ಹಿಂದೆ ಒಂದೇ ಗುಂಪಿನ ರಕ್ತದ ಅವಶ್ಯಕತೆ ಇತ್ತು. ಆದರೆ ಈಗ ಯಾವುದೇ ಗುಂಪಿನ ರಕ್ತ ಇದ್ದರೂ, ಕಿಡ್ನಿ ಕಸಿ ಮಾಡಬಹುದು ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ಡಾ. ಅನಿಲ್ ಕುಮಾರ್ ತಿಳಿಸಿದರು.
ಕಿಡ್ನಿ ಕಸಿಗೆ ಇನ್ಮುಂದೆ ಬ್ಲಡ್ ಗ್ರೂಪ್ ಯಾವ್ದಿದ್ರೂ ಓಕೆ... 500 ಟ್ರಾನ್ಸ್ಪ್ಲಾಂಟ್ ಮಾಡಿದೆ ಬಿಜಿಎಸ್ ಆಸ್ಪತ್ರೆ
ಕಿಡ್ನಿ ಕಸಿ ಮಾಡಲು ಮೊದಲಿನ ತರ ಒಂದೇ ರಕ್ತದ ಗುಂಪನ್ನು ಹೊಂದಿರುವವರೆ ಬೇಕೆಂಬ ಅವಶ್ಯಕತೆ ಇಲ್ಲವಾಗಿದ್ದು, ಯಾವುದೇ ಗುಂಪಿನ ರಕ್ತವಾದರೂ ಕಿಡ್ನಿ ಕಸಿಗೆ ಅವಕಾಶವಿದೆ ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ತಿಳಿಸಿದ್ದಾರೆ.
ಅಂಗ ಕಸಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯು, 500 ಮೂತ್ರಪಿಂಡ ಕಸಿ( ಕಿಡ್ನಿ ಕಸಿ) ಪೂರ್ಣಗೊಳಿಸಿ, ದಾಖಲೆ ಮುರಿಯುವಂತಹ ಮತ್ತೊಂದು ಸಾಧನೆಯನ್ನು ಮಾಡಿದೆ. ಈ ಸಾಧನೆಯನ್ನು ಕೇವಲ 9 ವರ್ಷಗಳಲ್ಲಿ ಮಾಡಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ ಸರಾಸರಿ 7-8 ಮೂತ್ರಪಿಂಡ ಕಸಿ ನಡೆಸಲಾಗುತ್ತಿದೆ. ಇದು ರಾಜ್ಯದಲ್ಲಿ ಅತ್ಯಂತ ದೊಡ್ಡ ಮೂತ್ರಪಿಂಡ ಕಸಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಸುದ್ದಿಗೋಷ್ಠಿ ನಡೆಸಿ ಸಂತಸವನ್ನ ಹಂಚಿಕೊಂಡರು.
ಇನ್ನು ಇದೇ ವೇಳೆ ಕಿಡ್ನಿ ಕಸಿ ಮಾಡಿಸಿಕೊಂಡು ಯಶಸ್ವಿಯಾದವರು ಸಹ ತಮ್ಮ ಅನುಭವವನ್ನ ಹಂಚಿಕೊಂಡಿದ್ದು, ಬೆಂಗಳೂರಿನ ಲಗ್ಗರೆ ನಿವಾಸಿ ಶಿವಾಜಿ ರಾವ್, ಅವರ ಪತ್ನಿ ವೀಣಾಗೆ ತಮ್ಮ ಒಂದು ಕಿಡ್ನಿಯನ್ನ ನೀಡಿದ್ದು, ಅಂಗಾಂಗ ದಾನದ ಬಗ್ಗೆ ಜನರು ಜಾಗೃತಿ ಗೊಳ್ಳಬೇಕು ಎಂದು ತಿಳಿಸಿದರು. ಈಗ ತಂತ್ರಜ್ಞಾನ ಮುಂದುವರೆದಿರೋದ್ರಿಂದ ಕಿಡ್ನಿ ಕಸಿಗೆ ನಿರ್ದಿಷ್ಟ ಗುಂಪಿನ ರಕ್ತದ ಅವಶ್ಯಕತೆ ಇಲ್ಲ. ಹೀಗಾಗಿ ಇವರಿಬ್ಬರ ರಕ್ತದ ಗುಂಪು ಬೇರೆ ಬೇರೆ ಯಾದರೂ ಕಿಡ್ನಿ ಕಸಿಯನ್ನ ಯಶಸ್ವಿಯಾಗಿ ಮಾಡಲಾಗಿದೆ. ಸದ್ಯ ಇಬ್ಬರು ಸಾಮಾನ್ಯ ಜೀವನ ನಡೆಸುತ್ತಿದ್ದು, ವೈದ್ಯರು, ನಿತ್ಯಾ ಯೋಗಾಭ್ಯಾಸ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.