ಬೆಂಗಳೂರು:ಕೋರ್ಟ್ನಲ್ಲಿ ನಮ್ಮ ಪ್ರಕರಣ ವಿಳಂಬವಾಗುತ್ತಿದೆ ಎನ್ನುವ ಆತಂಕ ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಕೋರ್ಟ್ ಕೇಸ್ ವಿಳಂಬ ಬಿಟ್ಟರೆ ಬೇರೆ ಸಮಸ್ಯೆ ಇಲ್ಲ: ಪ್ರತಾಪ್ ಗೌಡ ಪಾಟೀಲ್ - court case opinion
ಕೋರ್ಟ್ನಲ್ಲಿ ನಮ್ಮ ಪ್ರಕರಣ ವಿಳಂಬವಾಗುತ್ತಿದೆ ಎನ್ನುವ ಆತಂಕ ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೆಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ. ಜೊತೆಗೆ ಈ ತಿಂಗಳೊಳಗೆ ಪ್ರಕರಣ ಮುಗಿಯುವ ಸಾಧ್ಯತೆಯಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ನೀಡಿ ಸಿಎಂ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಸಭೆ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನನಗೇನೂ ಮಾಹಿತಿ ಇಲ್ಲ ಎಂದರು. ಜೊತೆಗೆ, ರಾಜೀನಾಮೆ ಬಳಿಕ ಅತಂತ್ರ ಸ್ಥಿತಿ ಅಂತ ಏನೂ ಇಲ್ಲ ಪ್ರತಾಪ್ಗೌಡ ಸ್ಪಷ್ಟಪಡಿಸಿದ್ರು.
ಕೋರ್ಟ್ನಲ್ಲಿ ತನ್ನದೇ ಆದ ಸಮಯಕ್ಕೆ ನಮ್ಮ ಕೇಸ್ ಬರುತ್ತದೆ, ನಾವು ಹೇಳಿದಾಗ ತೆಗೆದುಕೊಳ್ಳಬೇಕು ಎಂದೇನೂ ನಿಯಮವಿಲ್ಲ. ಇವತ್ತಲ್ಲ ನಾಳೆ ಇತ್ಯರ್ಥವಾಗುತ್ತದೆ, ಈ ತಿಂಗಳ ಒಳಗೆ ಪ್ರಕರಣ ಮುಗಿಯುವ ವಿಶ್ವಾಸವಿದೆ. ಉಳಿದಂತೆ ಏನೂ ತೊಂದರೆ ಇಲ್ಲ ಕ್ಷೇತ್ರದಲ್ಲಿ ಎಲ್ಲಾ ಕೆಲಸ ನಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು.