ಬೆಂಗಳೂರು: ನಗರದಲ್ಲಿನ ಬಿಬಿಎಂಪಿ ವ್ಯಾಪ್ತಿಯ ಜಾಗದಲ್ಲಿ ಕಟ್ಟಲಾಗಿರುವ ಹಾಗೂ ಬಿಬಿಎಂಪಿ ಜಾಗ ಒತ್ತುವರಿ ಮಾಡಿರುವ ಭೂಕಬಳಿಕೆದಾರರನ್ನ ತೆರವುಗೊಳಿಸಲು ಬಿಬಿಎಂಪಿಯಲ್ಲಿ ಹಣಕಾಸು ಕೊರತೆ ಇದೆ ಎಂದು ಪಾಲಿಕೆ ಆಯುಕ್ತರು ಒಪ್ಪಿಕೊಂಡಿದ್ದಾರೆ.
ಅಕ್ರಮ ಕಟ್ಟಡ ತೆರವಿಗೆ ಬಿಬಿಎಂಪಿಯಲ್ಲಿ ಕಾಸಿಲ್ಲ; ಹೈಕೋರ್ಟಲ್ಲಿ ಆರ್ಥಿಕ ಸ್ಥಿತಿ ಬಿಚ್ಚಿಟ್ಟ ಆಯುಕ್ತರು - ಬೃಹತ್ ಬೆಂಗಳೂರು ಪಾಲಿಕೆ ಆಯುಕ್ತರು
ನಗರದಲ್ಲಿನ ಬಿಬಿಎಂಪಿ ವ್ಯಾಪ್ತಿಯ ಜಾಗದಲ್ಲಿ ಕಟ್ಟಲಾಗಿರುವ ಹಾಗೂ ಬಿಬಿಎಂಪಿ ಜಾಗವನ್ನು ಒತ್ತುವರಿ ಮಾಡಿರುವ ಭೂ ಕಬಳಿಕೆದಾರರನ್ನು ತೆರವುಗೊಳಿಸಲು ಬಿಬಿಎಂಪಿಯಲ್ಲಿ ಹಣಕಾಸು ಕೊರತೆ ಇದೆ ಎಂದು ಪಾಲಿಕೆ ಆಯುಕ್ತರೇ ಒಪ್ಪಿಕೊಂಡಿದ್ದಾರೆ.
ಬೃಹತ್ ಬೆಂಗಳೂರು ಪಾಲಿಕೆ ಆಯುಕ್ತರೇ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಸಂಗತಿ ಒಪ್ಪಿಕೊಂಡಿದ್ದಾರೆ. ಸರ್ಕಾರದ ಆಸ್ತಿ ಉಳಿಸಿಕೊಳ್ಳಲು ಹಣಕಾಸಿನ ಕೊರತೆ ಇರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿಯಾಗಿ ಪರಿಗಣಿಸಿ ವಿಚಾರಣೆ ನಡೆಸಲು ಮುಖ್ಯನ್ಯಾಯಮೂರ್ತಿ ಒಳಗೊಂಡ ವಿಭಾಗೀಯ ಪೀಠ ನಿರ್ಧರಿಸಿದೆ.
ಬಿಬಿಎಂಪಿ ಅನಧಿಕೃತ ಕಟ್ಟಡಗಳ ತೆರವು ವಿಚಾರಕ್ಕೆ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಆದೇಶ ನೀಡಿದ್ದು, ಈ ಅರ್ಜಿ ವಿಚಾರಕ್ಕೆ ಸೆ.6 ರಂದು ಅಗತ್ಯ ನಿರ್ದೇಶನ ನೀಡುವುದಾಗಿ ಹೈಕೋರ್ಟ್ ತಿಳಿಸಿದೆ.