ಬೆಂಗಳೂರು: ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ: ಬಾಲಚಂದ್ರ ಜಾರಕಿಹೋಳಿ - ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ
ಬರೀ ದರ ಹೆಚ್ಚಳ ಮಾಡೋದಷ್ಟೇ ಅಲ್ಲ. ದರ ಹೆಚ್ಚಳದಲ್ಲಿ ರೈತರ ಪಾಲೆಷ್ಟು, ವರ್ತಕರಿಗೆ ಎಷ್ಟು ಅನ್ನೋ ಬಗ್ಗೆ ನಿರ್ಧಾರ ಮಾಡಬೇಕಿದೆ. ಹಾಲು, ಮೊಸರು, ಹಾಲಿನ ಪದಾರ್ಥಗಳ ದರವನ್ನೂ ಕೂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದು ಬಾಲಚಂದ್ರ ಜಾರಕಿಹೋಳಿ ತಿಳಿಸಿದರು.
![ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ: ಬಾಲಚಂದ್ರ ಜಾರಕಿಹೋಳಿ ಬಾಲಚಂದ್ರ ಜಾರಕಿಹೋಳಿ, Balachandra jarkiholi](https://etvbharatimages.akamaized.net/etvbharat/prod-images/768-512-5741677-thumbnail-3x2-nin.jpg)
ಈ ಬಗ್ಗೆ ಸಿಎಂ ಯಡಿಯೂರಪ್ಪರೊಂದಿಗೆ ಚರ್ಚಿಸಿದ ನಂತರ ಅದಷ್ಟು ಬೇಗ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನಿನ್ನೆಯೂ ಕೂಡ ಸಿಎಂ ಗಮನಕ್ಕೆ ಈ ವಿಷಯವನ್ನು ತರಲಾಗಿದೆ ಎಂದ ಅವರು, ಇನ್ನು ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಿದ್ದು, ಬರೀ ದರ ಹೆಚ್ಚಳ ಮಾಡೋದಷ್ಟೇ ಅಲ್ಲ. ದರ ಹೆಚ್ಚಳದಲ್ಲಿ ರೈತರ ಪಾಲೆಷ್ಟು, ವರ್ತಕರಿಗೆ ಎಷ್ಟು ಅನ್ನೋ ಬಗ್ಗೆ ನಿರ್ಧಾರ ಮಾಡಬೇಕಿದೆ. ಹಾಲು, ಮೊಸರು, ಹಾಲಿನ ಪದಾರ್ಥಗಳ ದರವನ್ನೂ ಕೂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದರು.
70 ಲಕ್ಷ ಲೀಟರ್ ಹಾಲಿನ ಪೈಕಿ 40ರಷ್ಟು ಹಾಲು, ಮೊಸರಿಗೆ ಹೋಗಲಿದೆ. 30ರಷ್ಟು ಇತರ ಪದಾರ್ಥಗಳಿಗೆ ಹೋಗಲಿದೆ. ಗ್ರಾಹಕರಿಗೂ ಹೊರೆಯಾಗದಂತೆ ದರ ಹೆಚ್ಚಳ ಮಾಡಲಾಗುವುದು ಎಂದು ಮಾಹಿತಿ ನೀಡಿದರು.