ಕರ್ನಾಟಕ

karnataka

ETV Bharat / state

ಹೊರ ರಾಜ್ಯದವರಿಗೆ ಕರ್ನಾಟಕದಲ್ಲಿ ಅಭದ್ರತೆ ಇಲ್ಲ, ಯಾರೇ ಬಂದರೂ ಸ್ವಾಗತಿಸುವ ಔದಾರ್ಯ ಕನ್ನಡಿಗರದ್ದು : ಅಣ್ಣಾಮಲೈ - ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ

ಕರ್ನಾಟಕದ ಜನ ತುಂಬಾ ವಿಶಾಲ ಹೃದಯದವರು. ಯಾರೇ ಬಂದರೂ ಸ್ವಾಗತ ಮಾಡುತ್ತಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ
ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ

By

Published : Apr 24, 2023, 4:59 PM IST

ಬೆಂಗಳೂರು : ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಜನರಿಗೆ ಇಲ್ಲಿ ಯಾವುದೇ ಅಭದ್ರತೆ ಇಲ್ಲ. ಇಂತಹ ವಾತಾವರಣವನ್ನು ಬೇರೆ ಯಾವುದೇ ಕಡೆಯಲ್ಲೂ ನೋಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಜನ ತುಂಬಾ ವಿಶಾಲ ಹೃದಯದವರು. ಯಾರೇ ಬಂದರೂ ಸ್ವಾಗತ ಮಾಡುತ್ತಾರೆ. ಬೇರೆ ಬೇರೆ ರಾಜ್ಯದಿಂದ ಬಂದು ಜನರು ಇಲ್ಲಿ ಸೆಟಲ್ ಆಗಿದ್ದಾರೆ. ನಾನು ತಮಿಳುನಾಡಿನಿಂದ ಬಂದವನು. ಇಲ್ಲಿ ತಮಿಳುನಾಡಿನಿಂದ ಬಂದವರು ಅನೇಕರು ವಾಸ ಆಗಿದ್ದಾರೆ. ಬಂದವರನ್ನ ಇಲ್ಲಿನ ಜನ ನಮ್ಮವರು ಅಂತ ನೋಡುತ್ತಾರೆ. ಆದರೆ ಬೇರೆಲ್ಲೂ ಈ ರೀತಿಯ ವಾತಾವರಣ ನೋಡಲು ಸಾಧ್ಯವಿಲ್ಲ. ಇಲ್ಲಿ ಹೊರರಾಜ್ಯದಿಂದ ಬಂದವರಿಗೆ ಯಾವುದೇ ಅಭದ್ರತೆ ಕಾಡಲ್ಲ ಎಂದರು.

ಕಾಂಗ್ರೆಸ್ ಹತಾಶೆಯಿಂದ ತಳಬುಡವಿಲ್ಲದ ಆರೋಪ ಮಾಡುತ್ತಿದೆ. ಕ್ಷೇತ್ರದಲ್ಲಿ ನಮಗೆ ಜನ ಬೆಂಬಲ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮೂರುವರೆ ವರ್ಷ ಬಿಜೆಪಿ ಸರ್ಕಾರ ಕೆಲಸ ಮಾಡಿದೆ. ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆ ಕಾಣುತ್ತಾ ಇದೆ. ಹೀಗಾಗಿ ಕರ್ನಾಟಕದ ಜನ ಈ ಬಾರಿ ಬಿಜೆಪಿಗೆ ಬಹುಮತ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ರು.

ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ : ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಆಧಾರ ರಹಿತವಾದ ಆರೋಪವನ್ನು ಕಾಂಗ್ರೆಸ್ ಮಾಡ್ತಾಯಿದೆ. ಬಿಜೆಪಿ ಪರವಾಗಿ ಜನರು ಇದ್ದಾರೆ. ಡಬಲ್ ಇಂಜಿನ ಸರ್ಕಾರ ಸಾಧನೆಯನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಜನರ ಬಳಿ ಚರ್ಚೆ ಮಾಡುತ್ತೇವೆ. ಮತ ಕೇಳುತ್ತೇವೆ, ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ‌‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗ ಎಲೆಕ್ಷನ್ ಸೀಸನ್, ಈ ಸಂದರ್ಭದಲ್ಲಿ ವಿಪಕ್ಷಗಳು ಬೇಸ್ ಲೆಸ್ ಆರೋಪ ಮಾಡುತ್ತಿವೆ. ಈ ಮೂಲಕ ಕಾಂಗ್ರೆಸ್​ನವರು ಗೆದ್ದುಬಿಡುತ್ತೇವೆ ಅಂತ ನಂಬಿದ್ದಾರೆ. ಬಿಜೆಪಿ ಪರ ಜನ ನಿಂತಿದ್ದಾರೆ. ಜನ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ, ಇಲ್ಲಿನ ಆಡಳಿತ ನೋಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಕೆಲಸ ನೋಡಿದ್ದಾರೆ. ಈ ಬಾರಿ ಸಂಪೂರ್ಣ ಆಡಳಿತ ಬಿಜೆಪಿಗೆ ನೀಡಬೇಕು ಅನ್ನೋ ವಾತಾವರಣ ನೋಡುತ್ತಿದ್ದೇವೆ‌. ಬಿಜೆಪಿ ಯಾವಾಗಲೂ ಸಂಪೂರ್ಣ ಬದಲಾವಣೆ ಇರುವ ಪಕ್ಷ ಎಂದು ಹೇಳಿದರು.

ರಿಸ್ಕ್ ತಗೊಂಡೆ ಇಷ್ಟು ದೊಡ್ಡ ಪಕ್ಷವಾಗಿ ಬೆಳೆಸಿದ್ದೇವೆ. ಆರ್ಥಿಕ ಬೆಳವಣಿಗೆ ಕೂಡ ಉತ್ತಮವಾಗಿದೆ. ಇಂಟರ್​ನ್ಯಾಷನಲ್​​ ಆರ್ಥಿಕ ತಜ್ಞರು ಕೂಡ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನೋಡುತ್ತಿದ್ದಾರೆ. ಜಿಎಸ್​ಟಿ, ಟ್ಯಾಕ್ಸ್ ಎಲ್ಲವನ್ನೂ ಮಾಡಿದೆ. ಚಿದಂಬರಂ ಹೇಳಿದ್ದರು ಡಿಜಿಟಲ್ ಕರೆನ್ಸಿ ಸಾಧ್ಯಾನಾ ಅಂತ? ಈಗ ಟ್ರಾನ್ಸ್​ಫರ್​ ಎಕಾನಮಿ ನೋಡುತ್ತಿದ್ದೇವೆ. ಕರ್ನಾಟಕದಲ್ಲಿ ನಂಬರ್ ಒನ್ ಆನ್​ಲೈನ್ ಟ್ರಾನ್ಸಾಕ್ಷನ್ ಆಗಿದೆ. ದಕ್ಷಿಣ ಭಾರತದಲ್ಲಿ ನಂಬರ್ ಒನ್ ಸ್ಟೇಟ್ ಆಗಿದೆ. ಆದಾಯ ಬಜೆಟ್ ಕೂಡ ಬೊಮ್ಮಾಯಿ ಅವರು ಮಂಡಿಸಿದ್ದಾರೆ ಎಂದರು.

ಏಪ್ರಿಲ್ 25, 26ರಂದು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಪ್ರಚಾರ ಸಮಿತಿ ಸಭೆ ಮಾಡುತ್ತಿದ್ದೇವೆ. ರಾಷ್ಟ್ರೀಯ ನಾಯಕರು ಬರಲಿದ್ದಾರೆ. ಫಲಾನುಭವಿಗಳನ್ನ ಭೇಟಿ ಮಾಡುತ್ತೇವೆ. ಪ್ರಧಾನಿಯವರು ಮೆಚ್ಚಿರುವ ಸ್ಥಳೀಯ ನಾಯಕರ ಭೇಟಿ ಮಾಡುತ್ತೇವೆ. ಮಠಗಳಿಗೆ, ಪ್ರಮುಖ ದೇವಸ್ಥಾನಗಳಿಗೆ ಹೋಗುತ್ತೇವೆ. 75 ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಅದರಲ್ಲಿ ಭಾಗೀರಥಿ ಮುರಳಿ ಅವರು ನಮಗೆ ಉದಾಹರಣೆ. ಸುಳ್ಯ ಅಭ್ಯರ್ಥಿ ಆಗಿ ಕಣದಲ್ಲಿದ್ದಾರೆ. ಈಶ್ವರ್ ಸಿಂಗ್ ಠಾಕೂರ್, ಗುರುರಾಜ್ ಗಂಟಿಹೊಳೆ ಸೇರಿದಂತೆ ಅನೇಕರು ಇದ್ದಾರೆ. 224 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 224 ಕ್ಷೇತ್ರಗಳಲ್ಲಿ ಯುನಿಕ್​​ ಸ್ಟೋರಿ‌ ಇದೆ ಎಂದು ಹೇಳಿದರು.

ನೀವು ಜರ್ನಲಿಸ್ಟ್ ಕೇಳಿರುವ ಪ್ರಶ್ನೆಗೆ ನಾನು ನೀಡುವ ಉತ್ತರ ಸರಿ ತಪ್ಪು ಅಂತಾ ನೀವು ಡಿಸೈಡ್ ಮಾಡಬೇಡಿ. ಅದನ್ನು ಜನರಿಗೆ ಬಿಡಿ, ನೀವು ವೀವರ್ಸ್ ಅಲ್ಲ ಎಂದ ಅಣ್ಣಾಮಲೈ ಕುಟುಂಬ ರಾಜಕೀಯ ವಿಚಾರದಲ್ಲಿ ಪದೇ ಪದೆ ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತರ ಮೇಲೆ ಗರಂ ಆದರು. ಹಣೆಗೆ ಗನ್ ಪಾಯಿಂಟ್ ಇಟ್ಟಂತೆ ನಾನು ಹೇಳಿದ್ದು ಕೇಳಿ ಎಂದು ನಾನು ಹೇಳಲ್ಲ. ನನ್ನ ಮಾತನ್ನು ಜನರಿಗೆ ಬಿಡಿ, ನಮ್ಮಲ್ಲಿ ಒಂದೇ ಕುಟುಂಬ ರಾಜಕೀಯ ನಿರ್ಧಾರ ಮಾಡಲ್ಲ, ಕೆಲವರ ಮಕ್ಕಳಿಗೆ ನೀಡಿದ್ದೇವೆ ಎಂದರೆ, ಅವರು ಕಾರ್ಯಕರ್ತರು ಅಷ್ಟೇ. ಅವರು ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿ ಇಲ್ಲ. ಅಜ್ಜ, ಅಜ್ಜಿ, ಮಗ, ಮೊಮ್ಮಗ ಅಂತ ನಮ್ಮಲ್ಲಿ ಡಿಸಿಷನ್ ಮೇಕರ್ ಇಲ್ಲ ಎಂದು ಕಾಂಗ್ರೆಸ್​ ವಿರುದ್ಧ ಟೀಕಿಸಿದರು.

ಮೇಕೆದಾಟು ವಿಚಾರದಲ್ಲಿ ಕೇಂದ್ರದ ನಿರ್ಧಾರಕ್ಕೆ ಬದ್ಧ : ಮೇಕೆದಾಟು ವಿಚಾರದಲ್ಲಿ ಕೇಂದ್ರ ಏನು ತೀರ್ಮಾನ ಮಾಡತ್ತದೆಯೋ ಅದೇ ನಮ್ಮ ನಿಲುವು. ಇದರಲ್ಲಿ ಅಂತಾರಾಜ್ಯ ವಿವಾದ ಇದೆ. ಹೀಗಾಗಿ ಸಂಸತ್ತಿನಲ್ಲಿ ಕೇಂದ್ರ ಸಚಿವರು ಏನು ಉತ್ತರ ನೀಡಿದ್ದಾರೆಯೋ ಅದೇ ಉತ್ತರವನ್ನು ಇಲ್ಲಿರುವ ಲೀಡರ್ಸ್ ಕೂಡ ಒಪ್ಪಿದ್ದಾರೆ. ತಮಿಳುನಾಡು ಪಾರ್ಟಿ ನಾಯಕರು ಕೂಡ ಒಪ್ಪಿದ್ದಾರೆ. ಇದು ಡೆಮಾಕ್ರಸಿ ಇರುವ ದೇಶ. ಏನೇ ಮಾಡುವಾಗಲೂ ಒಂದು ನಿಯಮ ಇರುತ್ತದೆ. ಆ ನಿಯಮವನ್ನು ತಮಿಳುನಾಡು, ಕರ್ನಾಟಕ ಯಾರೇ ಇರಲಿ ಫಾಲೋ ಮಾಡಬೇಕಾಗುತ್ತದೆ ಎಂದು ಅಣ್ಣಾಮಲೈ ಹೇಳಿದ್ರು.

ಇದನ್ನೂ ಓದಿ:ಸೋಮವಾರ ಅಮಿತ್ ಶಾ, ಜೆ ಪಿ‌ ನಡ್ಡಾ ರಾಜ್ಯಕ್ಕೆ ಎಂಟ್ರಿ: ವಿವಿಧೆಡೆ ಪ್ರತ್ಯೇಕ ರೋಡ್ ಶೋ ನಡೆಸಿ ಮತಬೇಟೆ

ABOUT THE AUTHOR

...view details