ಕರ್ನಾಟಕ

karnataka

ETV Bharat / state

ರೋಮ್​​ನ ಅಂದಿನ ದೊರೆ ನೀರೋಗೂ ಕಾಂಗ್ರೆಸ್​​ನವರಿಗೂ ವ್ಯತ್ಯಾಸವಿಲ್ಲ: ಸಚಿವ ಸುಧಾಕರ್​​ - no difference for the Congress and Emperor of Rome

ಕೊರೊನಾ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್​​ನವರಿಗೂ ಮತ್ತು ರೋಮ್​ ದೊರೆ ನೀರೋಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ನಡೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟೀಕಿಸಿದ್ದಾರೆ.

ಡಾ. ಸುಧಾಕರ್
ಡಾ. ಸುಧಾಕರ್

By

Published : May 5, 2020, 5:44 PM IST

ಬೆಂಗಳೂರು:ಕೊರೊನಾ ವಿಷಯದಲ್ಲೂ ರಾಜಕೀಯವೇ ತಮಗೆ ಮುಖ್ಯ ಮತ್ತು ಲಾಭ ಅನ್ನುವ ಇವರ ಮನಸ್ಥಿತಿ ಹಾಗೂ ರೋಮ್​​ನ ಅಂದಿನ ದೊರೆ ನೀರೋಗೂ ವ್ಯತ್ಯಾಸವಿಲ್ಲ. ಯಾಕೆಂದರೆ ರೋಮ್‌ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದನಂತೆ ಎಂದು ಕಾಂಗ್ರೆಸ್ ನಾಯಕರ ನಡೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟೀಕಿಸಿದ್ದಾರೆ.

ಕಾಂಗ್ರೆಸ್​​​ನವರು ಕಾರ್ಮಿಕರ ಬಸ್ ಮತ್ತು ಟ್ರೈನ್ ಚಾರ್ಜ್ ಕೊಡುತ್ತೇವೆ ಎಂದು ರೋಡ್ ರೋಡ್​​ನಲ್ಲಿ ಅದರ ಜಾಹೀರಾತುಗಳನ್ನ ಕೊಟ್ಟಿರುವುದು ನೋಡಿದ್ರೆ ಇದು ಭರ್ಜರಿ ಬಯಲು ನಾಟಕ ಎಂದು ಗೊತ್ತಾಗುತ್ತದೆ.

ಡಾ. ಸುಧಾಕರ್ ಟ್ವೀಟ್​

ನಿಯಮದಂತೆ ಹಣ ಯಾರಿಗೆ ಕೊಡಬೇಕಿತ್ತೋ ಅವರಿಗೆ ಕೊಡುವುದು ಬಿಟ್ಟು ಊರೆಲ್ಲ ಕ್ಯಾಮರಾ ಮುಂದೆ ಕೊರೊನಾ ಮೀರುವ ಓಡಾಟ, ಚೀರಾಟ ಮತ್ತು ಹಾರಾಟ ಎಂದು ಟ್ವೀಟ್ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರ ವಿರುದ್ಧ ಸಚಿವ ಸುಧಾಕರ್ ಹರಿಹಾಯ್ದಿದ್ದಾರೆ.

ABOUT THE AUTHOR

...view details