ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿಂದು ವರದಿಯಾಗದ ಕೊರೊನಾ: ಸಿಲಿಕಾನ್​ ಸಿಟಿ ನಿರಾಳ

ರಾಜ್ಯದಲ್ಲಿಂದು 12 ಹೊಸ ಕೊರೊನಾ ಪ್ರರಕಣಗಳು ಪತ್ತೆಯಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಇನ್ನು ಬೆಂಗಳೂರಲ್ಲಿಂದು ಒಂದೂ ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿಲ್ಲ.

There is no Corona positive case reported in Bangalore today
ರಾಜಧಾನಿಯಲ್ಲಿಂದು ವರದಿಯಾಗದ ಕೊರೊನಾ: ಸಿಲಿಕಾನ್ ಸಿಟಿ ನಿರಾಳ

By

Published : Apr 29, 2020, 9:50 PM IST

ಬೆಂಗಳೂರು:ರಾಜ್ಯದಲ್ಲಿ 12 ಹೊಸ ಕೋವಿಡ್-19 ಪ್ರಕರಣ ಕಂಡುಬಂದರೂ ರಾಜಧಾನಿಯಲ್ಲಿ ಒಂದೂ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. 135ಕ್ಕೆ ಕೊರೊನಾ ಕೇಸ್​​​ಗಳು ಕೊನೆಯಾಗಿವೆ. ಅಲ್ಲದೆ ಕಂಟೈನ್​​ಮೆಂಟ್ ಝೋನ್ ಆಗಿರುವ ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿಯೂ ಒಂದೂ ಕೊರೊನಾ ಕೇಸ್​ಗಳು ಕಂಡುಬರದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

ಅಲ್ಲದೆ ಈಗಾಗಲೇ ನಿಯಂತ್ರಿತ ವಲಯದಲ್ಲಿರುವ ಹೊಂಗಸಂದ್ರ ನಿವಾಸಿಗಳಿಗೆ ಪ್ರತಿದಿನ ಹೆಚ್ಚಾಗುತ್ತಿದ್ದ ಕೊರೊನಾ ಪ್ರಕರಣಗಳು ನಿದ್ದೆಗೆಡಿಸಿದ್ದವು. ಆದ್ರೆ ನಿನ್ನೆ 72 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಆ ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿರುವುದರಿಂದ ಕೊಂಚ ಮಟ್ಟಿಗೆ ಸಮಾಧಾನವಾಗಿದ್ದಾರೆ.

ಭಾನುವಾರ 49, ಸೋಮವಾರ 73, ನಿನ್ನೆ 72 ಸೇರಿ ಒಟ್ಟು ಮೂರು ದಿನಗಳಲ್ಲಿ 171 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿವೆ. ಬಿಹಾರದ ಕೂಲಿ ಕಾರ್ಮಿಕರನ್ನು ಟೆಸ್ಟ್ ಮಾಡಿದಾಗ ಮಾತ್ರ ಪಾಸಿಟಿವ್ ಕಂಡು ಬರುತ್ತಿತ್ತು. ಅವರನ್ನು ಕೂಡಲೇ ಕ್ವಾರಂಟೈನ್ ಮಾಡಿದ ಹಿನ್ನೆಲೆ ಹೊಂಗಸಂದ್ರ, ವಿದ್ಯಾಜ್ಯೋತಿ ನಗರದ ನಿವಾಸಿಗಳಿಗೆ ಯಾರಿಗೂ ಕೊರೊನಾ ಹರಡಿಲ್ಲ.

ಯಾವುದೇ ರಿಪೋರ್ಟ್ ಬಾಕಿ ಇಲ್ಲ. ಹೀಗಾಗಿ ವಿದ್ಯಾಜ್ಯೋತಿ ನಗರದ ನಿವಾಸಿಗಳು ಸಂತಸ ಪಟ್ಟಿದ್ದಾರೆ. ಇನ್ನು ಪಾದರಾಯನಪುರದಲ್ಲೂ 48 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ. ನಿನ್ನೆ ರ್ಯಾಂಡಮ್​ ಆಗಿ ಸ್ಥಳೀಯರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ವರದಿ ಪ್ರಕಟವಾದಾಗ ಎಲ್ಲರ ರಿಪೋರ್ಟ್ ಕೊರೊನಾ ನೆಗೆಟಿವ್ ಬಂದಿದೆ. ಅಲ್ಲದೆ ಇಂದು 19 ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದೆ. ಇವೆರಡು ವಾರ್ಡ್​ಗಳಷ್ಟೇ ಅಲ್ಲದೆ ‌ನಗರದ ಬೇರೆಲ್ಲೂ ಕೊರೊನಾ ಪಾಸಿಟಿವ್​​ ಕಂಡು ಬಂದಿಲ್ಲ.

ABOUT THE AUTHOR

...view details