ಕರ್ನಾಟಕ

karnataka

ETV Bharat / state

ಚಿಕಿತ್ಸೆ ನೀಡದವರ ವಿರುದ್ಧ ದೂರುಗಳೇ ಬಂದಿಲ್ಲ ; ಹೈಕೋರ್ಟ್‌ಗೆ ಕೆಎಂಸಿ ಮಾಹಿತಿ

ಕೊರೊನಾ ಸೋಂಕು ರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಾಗಲಿ ಅಥವಾ ಆಸ್ಪತ್ರೆಗಳಾಗಲಿ ನಿರಾಕರಿಸಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಕರ್ನಾಟಕ ವೈದ್ಯಕೀಯ ಪರಿಷತ್ (ಕೆಎಂಸಿ) ಹೈಕೋರ್ಟ್‌ಗೆ ಮಾಹಿತಿ ನೀಡಿದೆ..

High Court
High Court

By

Published : Jul 17, 2020, 9:04 PM IST

ಬೆಂಗಳೂರು :ಕೊರೊನಾ ಸೋಂಕು ರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಾಗಲಿ ಅಥವಾ ಆಸ್ಪತ್ರೆಗಳಾಗಲಿ ನಿರಾಕರಿಸಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಕರ್ನಾಟಕ ವೈದ್ಯಕೀಯ ಪರಿಷತ್ (ಕೆಎಂಸಿ) ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕೊರೊನಾ ಸೋಂಕು ರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂದು ಆರೋಪಿಸಿ ತುಮಕೂರು ಮೂಲದ ವಕೀಲ ರಮೇಶ್‌ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಕೆಎಂಸಿ ಈ ಮಾಹಿತಿ ನೀಡಿದೆ.

ಅರ್ಜಿ ವಿಚಾರಣೆ ವೇಳೆ ಕೆಎಂಸಿ ಪರ ವಕೀಲರು ವಾದಿಸಿ, ಕೋವಿಡ್-19 ರಹಿತ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿರುವ ಬಗ್ಗೆ ಈವರೆಗೆ ಯಾವುದೇ ದೂರುಗಳು ಬಂದಿಲ್ಲ. ಹಾಗೊಂದು ವೇಳೆ ದೂರುಗಳು ಬಂದ್ರೆ, 'ಕೋಡ್ ಆಫ್ ಮೆಡಿಕಲ್ ಎಥಿಕ್ಸ್-2002' ಪ್ರಕಾರ ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಜೊತೆಗೆ, ಕೋವಿಡ್-19 ರಹಿತ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸದಂತೆ ಎಲ್ಲಾ ವೈದ್ಯರು ಮತ್ತು ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.

ABOUT THE AUTHOR

...view details