ಬೆಂಗಳೂರು:ಡ್ರಗ್ಸ್ ವಿಚಾರದಲ್ಲಿ ನಮ್ಮ ಕಾನೂನು ಗಟ್ಟಿಯಾಗಿಲ್ಲ. ಇಂದ್ರಜಿತ್ ಮಾತಿನಲ್ಲಿ ಸತ್ಯವಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಶಾಸಕ ಎನ್. ಎ. ಹ್ಯಾರಿಸ್ ತಿಳಿಸಿದ್ದಾರೆ.
ಡ್ರಗ್ಸ್ ಹಾವಳಿ ತಡೆಗೆ ಕಾನೂನು ಇನ್ನಷ್ಟು ಬಲಗೊಳ್ಳಲಿ: ಇಂದ್ರಜಿತ್ ಹೇಳಿಕೆಗೆ ಹ್ಯಾರಿಸ್ ಬೆಂಬಲ - Sandalwood Drugs Network
ಡ್ರಗ್ಸ್ ವಿಚಾರವಾಗಿ ಇಂದ್ರಜಿತ್ ಅವರ ಹೇಳಿಕೆಗಳಲ್ಲಿ ಸತ್ಯವಿದೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಶಾಸಕ ಎನ್. ಎ. ಹ್ಯಾರಿಸ್ ತಿಳಿಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ಹೇಳಿದ ವಿಚಾರಗಳನ್ನು ಸಿಸಿಬಿ ಪೊಲೀಸರು ಸಮಗ್ರವಾಗಿ ತನಿಖೆ ಮಾಡಲಿ. ಕೇವಲ ನಟ ನಟಿಯರು ಅಂತ ನಾವು ಒಂದೆರಡು ದಿನ ಸುದ್ದಿ ಮಾಡಿ ತೋರಿಸಿದರೆ ಪ್ರಯೋಜನ ಇಲ್ಲ. ನಮ್ಮ ರಾಜ್ಯದ ಕಾನೂನು ಇನ್ನಷ್ಟು ಗಟ್ಟಿಯಾದರೆ ಮಾತ್ರ ಡ್ರಗ್ಸ್ ಹಾವಳಿ ತಡೆಗಟ್ಟಬಹುದು. ಇಲ್ಲದೆ ಹೋದರೆ ಪ್ರಯೋಜನವಿಲ್ಲ. ಇಂದ್ರಜಿತ್ ಲಂಕೇಶ್ ಹೇಳುವುದು ಸರಿ ಇದೆ. ಜೊತೆಗೆ ಸಮಗ್ರವಾಗಿ ತನಿಖೆ ಆಗಲಿ ಎಂದರು.
ಡ್ರಗ್ಸ್ ನ ಹಾವಳಿ ತಪ್ಪಿಸುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯ. ನಮ್ಮ ಕಾನೂನು ಇಂಥವರಿಗೆ ಶಿಕ್ಷೆ ವಿಧಿಸುವ ವಿಚಾರದಲ್ಲಿ ದುರ್ಬಲವಾಗಿದೆ. ಅದನ್ನು ಕಠಿಣಗೊಳಿಸಬೇಕು. ವ್ಯಾಪಾರ ಮಾಡುವವರು ಇದರಲ್ಲಿ ಹೆಚ್ಚಾಗಿದ್ದು, ರಾಜಕೀಯ ವ್ಯಕ್ತಿ, ಸಿನಿಮಾ ನಟರು ಅಥವಾ ಯಾರೇ ಇರಲಿ, ಅವರನ್ನು ತನಿಖೆಗೊಳಪಡಿಸಬೇಕು. ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು. ಕಾನೂನು ಬಲಪಡಿಸದಿದ್ದರೆ ಕಷ್ಟ ಆಗುತ್ತೆ. ಯಂಗ್ ಇಂಡಿಯಾ ಇದೆ, ಅದು ಯಂಗ್ ಆಗೇ ಇರಬೇಕು. ಇದರಲ್ಲಿ ಯಾರೇ ಇರಲಿ, ಅವರನ್ನು ಸರಿ ಪಡಿಸಬೇಕು. ಸಿಸಿಬಿಗೆ ಸಂಪೂರ್ಣ ಬೆಂಬಲ ಇದೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನೂ ಇದರ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎರಡೂ ಒಟ್ಟೊಟ್ಟಿಗೆ ಡ್ರಗ್ಸ್ ಸಮಸ್ಯೆ ಹತ್ತಿಕ್ಕಲು ಕಠಿಣ ಕಾನೂನು ತರಬೇಕು ಎಂದು ಶಾಸಕ ಹ್ಯಾರಿಸ್ ಒತ್ತಾಯಿಸಿದರು.