ಕರ್ನಾಟಕ

karnataka

ETV Bharat / state

ವಿದೇಶಕ್ಕೆ ತೆರಳುವ ಮೊದಲೇ ಸಿಎಂಗೆ ಸಂಪುಟ ವಿಸ್ತರಿಸುವ ಅಪೇಕ್ಷೆ.. - ವಿದೇಶಕ್ಕೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡುವ ಅಪೇಕ್ಷೆ ಇದೆ ಎಂದ ಸಿಎಂ ಯಡಿಯೂರಪ್ಪ

8-10 ದಿನಗಳಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಲಿದೆ. ನಾನು ವಿದೇಶಕ್ಕೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡೋ ಅಪೇಕ್ಷೆ ಇದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

cm yadiyurappa
ಸಿಎಂ ಯಡಿಯೂರಪ್ಪ

By

Published : Jan 6, 2020, 6:23 PM IST

ಬೆಂಗಳೂರು: 8-10 ದಿನಗಳಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಲಿದೆ. ನಾನು ವಿದೇಶಕ್ಕೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡೋ ಅಪೇಕ್ಷೆ ಇದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಜ.16-18ಕ್ಕೆ ಅಮಿತ್ ಶಾ ಬೆಂಗಳೂರಿಗೆ ಬರುತ್ತಾರೆ. ಅದಕ್ಕೂ ಮುನ್ನ ನಾನು ದೆಹಲಿಗೆ ಹೋಗಿ ಸಂಪುಟದ ಬಗ್ಗೆ ಮಾತಾಡಿಕೊಂಡು ಬರುತ್ತೇನೆ ಎಂದರು.

ಸಿಎಂ ಬಿ ಎಸ್‌ ಯಡಿಯೂರಪ್ಪ..

ದಾವೋಸ್‌ಗೆ ಹೋಗೋ ಆಸೆ ಇರಲಿಲ್ಲ. ಆದರೆ, ಹೋಗಲೇಬೇಕಾದ ಅನಿವಾರ್ಯತೆಯಿಂದಾಗಿ ಹೋಗುತ್ತಿದ್ದೇನೆ‌. ವಿದೇಶಕ್ಕೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಮಹಾದಾಯಿ ಬಗ್ಗೆ ಕೇಂದ್ರದ ಜೊತೆ ಚರ್ಚೆ:ಮೂರು ನಾಲ್ಕು‌ ದಿನಗಳಲ್ಲಿ ದೆಹಲಿಗೆ ಹೋಗುವೆ. ಮಹದಾಯಿ ವಿಚಾರವಾಗಿ ಸಚಿವರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಸಂಬಂಧ ಪಟ್ಟ ಸಚಿವರನ್ನು ಭೇಟಿಯಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡುತ್ತೇನೆ. ಗೋವಾ, ಮಹಾರಾಷ್ಟ್ರ ಸರ್ಕಾರದ ಜತೆಯೂ ಮಾತನಾಡಿ ಅಂತಾ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡುತ್ತೇವೆ ಎಂದರು.

For All Latest Updates

TAGGED:

ABOUT THE AUTHOR

...view details