ಬೆಂಗಳೂರು:ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೀಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿಶೋರ್ ಕುಮಾರ್ ಹಾಗೂ ಲೀಲಾವತಿ ಬಂಧಿತರು. ಆರೋಪಿಗಳಿಬ್ಬರು ಸೇರಿಕೊಂಡು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ವೆಂಕಟಲಕ್ಷ್ಮಮ್ಮ ಎಂಬ ಮಹಿಳೆ ಒಂಟಿಯಾಗಿ ವಾಸಿಸುವುದನ್ನು ನೋಡಿ ಅವರ ಮನೆಗೆ ನುಗ್ಗಿದ್ದರು. ಆಗ ವೆಂಕಟಲಕ್ಷ್ಮಮ್ಮರ ಬಾಯಿಗೆ ಬಟ್ಟೆಗಳನ್ನು ತುರುಕಿ, ಕೈಗಳನ್ನು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು.