ಬೆಂಗಳೂರು:ಪಾದಚಾರಿ ರಸ್ತೆಯಲ್ಲಿ ವಾಹನ ನಿಲ್ಲಿಸಬಾರದು ಎಂಬ ಕಾರಣಕ್ಕೆ ನೆಡುವ ಕಂಬಳನ್ನೂ ಕದೀಮರು ಬಿಡುತ್ತಿಲ್ಲ. ರಾತ್ರೋರಾತ್ರಿ ಬಂದು ಕಬ್ಬಿಣದ ಕಂಬಗಳನ್ನು ಕಳ್ಳರು ಕದಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮೂಲಕ ಪಾದಚಾರಿ ರಸ್ತೆಯಲ್ಲಿ ಕಂಬಗಳನ್ನು ಕದಿಯುವ ಕಳ್ಳರ ಬಣ್ಣ ಬಯಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬನಶಂಕರಿ ಏರಿಯಾ ರಸ್ತೆಯ ಪಾದಚಾರಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕಳ್ಳರು ಹಗಲು ರಸ್ತೆಯಲ್ಲಿ ಓಡಾಡಿ ಗುರುತು ಮಾಡಿಕೊಂಡು ರಾತ್ರಿ ಆಟೋದಲ್ಲಿ ಬಂದು ಕಳ್ಳತನದ ಕೆಲಸ ಮಾಡುತ್ತಿದ್ದಾರೆ. ಕಳ್ಳತನ ಮಾಡುತ್ತಿರುವ ಸಿಸಿಟಿವಿ ವಿಡಿಯೋ ಸೆರೆಯಾಗಿದ್ದು, ಅದರಲ್ಲಿ ಆಟೋದ ನಂಬರ್ ಸಹ ಗುರುತು ಸಿಗುವಂತಿದೆ.