ಬೆಂಗಳೂರು:ನಗರದ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ, ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲು ಕಬ್ಬಿಣದ ಬೋಲ್ಲಾರ್ಡ್ ಅಳವಡಿಸಲಾಗಿದೆ. ಆದ್ರೆ ದುರಂತ ಅಂದ್ರೆ ಕಳ್ಳರು ಅದನ್ನೂ ಬಿಡದೆ ಕಳವು ಮಾಡಿದ್ದಾರೆ.
ಟೆಂಡರ್ ಶ್ಯೂರ್ ರಸ್ತೆಯ ಕಬ್ಬಿಣದ ತಡೆ ಕಂಬಗಳನ್ನೇ ಕದ್ದ ಖದೀಮರು!
ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ವೃತ್ತದಲ್ಲಿದ್ದ ಎಂಟು ಬೋಲ್ಲಾರ್ಡ್ಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ದೂರು ದಾಖಲಿಸಿದೆ.
ಟೆಂಡರ್ ಶ್ಯೂರ್ ರಸ್ತೆ
ನಗರದ ಸೇಂಟ್ ಮಾರ್ಕ್ಸ್ ರಸ್ತೆಯ, ಬ್ಯಾಂಕ್ ಆಫ್ ಇಂಡಿಯಾ ಜಂಕ್ಷನ್ನಲ್ಲಿದ್ದ ಎಂಟು ಬೋಲ್ಲಾರ್ಡ್ಗಳ ಕಳ್ಳತನವಾಗಿದೆ. ಈ ಬಗ್ಗೆ ಬಿಬಿಎಂಪಿ ದೂರು ದಾಖಲಿಸಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿರುವ ಆಯುಕ್ತರಾದ ಬಿ. ಹೆಚ್ ಅನಿಲ್ ಕುಮಾರ್, ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡಾಗ ಪೊಲೀಸ್ ಕಂಟ್ರೋಲ್ ರೂಂ ಗಮನಕ್ಕೆ ತರಬೇಕು. ಸಾರ್ವಜನಿಕ ಆಸ್ತಿ ಉಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.