ಕರ್ನಾಟಕ

karnataka

ETV Bharat / state

ಬೆಂಗಳೂರು ಪೊಲೀಸರಿಂದ 174 ಬೈಕ್ ಗಳ ರಿಕವರಿ​: ಬುಲೆಟ್, ಕೆ.ಟಿ.ಎಂ, ಡ್ಯೂಕ್ ಗಳೇ ಟಾರ್ಗೆಟ್!! - Theft of 174 bikes in the southeastern section of Bangalore

ಬೆಂಗಳೂರಿನ ಆಗ್ನೇಯ ವಿಭಾಗದಲ್ಲಿ 174 ಬೈಕ್ ಗಳ ಕಳ್ಳತನವಾಗಿತ್ತು. ಕಳೆದ ಒಂದುವರೆ ತಿಂಗಳಲ್ಲೇ ಈ ಎಲ್ಲಾ ಬೈಕ್ ಗಳನ್ನ ರಿಕವರಿ ಮಾಡಿ ಆರೋಪಿಗಳನ್ನ ಬಂಧಿಸಲಾಗಿದೆ.

theft-of-174-bikes-in-the-southeastern-section-of-bangalore
174 ಬೈಕ್ ಗಳ ರಿಕವರಿ ಮಾಡಿದ ಪೊಲೀಸ್​

By

Published : Nov 26, 2020, 10:54 PM IST

ಬೆಂಗಳೂರು:ಕೋರಮಂಗಲ,ಮಡಿವಾಳ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಆಗ್ನೇಯ ಭಾಗದಲ್ಲಿ ಕಳೆದ ಒಂದು ತಿಂಗಳಲ್ಲಿ ಕಳವು ಆಗಿದ್ದ ಐದು ಕಾರು ಸೇರಿದಂತೆ 174 ಬೈಕ್ ಗಳನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ಪೊಲೀಸರಿಂದ 174 ಬೈಕ್ ಗಳ ರಿಕವರಿ

ಅನ್​​ಲಾಕ್​​ ಆದ‌ ಮೇಲೆ ಕಳ್ಳತನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿವೆ. ಅದೇ ರೀತಿ ಮನೆ ಮುಂದೆ ಪಾರ್ಕ್ ಮಾಡಿದ ಬೆಲೆ ಬಾಳುವ ಕೆ.ಟಿ.ಎಂ ಹಾಗೂ ರಾಯಲ್ ಎನ್​ಫೀಲ್ಡ್​ ಬೈಕ್ ಗಳನ್ನ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಲಾಗಿತ್ತು. ಹೀಗೆ ಆಗ್ನೇಯ ವಿಭಾಗದಲ್ಲಿ 174 ಬೈಕ್​ಗಳ ಕಳ್ಳತನವಾಗಿತ್ತು. ಹೀಗಾಗಿ, ಕಳೆದ ಒಂದುವರೆ ತಿಂಗಳಲ್ಲೇ ಬರೋಬ್ಬರಿ 174 ಬೈಕ್ ಗಳನ್ನ ರಿಕವರಿ ಮಾಡಿ ಆರೋಪಿಗಳನ್ನ ಬಂಧಿಸಲಾಗಿದೆ.

ಇದನ್ನೂ ಓದಿ:ಸೇಡಂನಲ್ಲಿ ನಾಡಿನ ಹೆಸರಾಂತ ಸಾಹಿತಿಗಳಿಗೆ 'ಅಮ್ಮ ಪ್ರಶಸ್ತಿ' ಪ್ರದಾನ

ಇಂದು ಸಿಎಆರ್ ಸೌಥ್ ಮೈದಾನದಲ್ಲಿ ವಾಹನ ಮಾಲೀಕರಿಗೆ ಬೈಕ್​​ಗಳನ್ನ ನಗರ ಪೊಲೀಸ್ ಆಯುಕ್ತರು ವಿತರಿಸಿದರು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸೇರಿದಂತೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಭಾಗಿಯಾಗಿದ್ದರು.ಈ ವೇಳೆ ರಿಕವರಿ ವಾಹನಗಳನ್ನು ಮೂಲ ಮಾಲೀಕರಿಗೆ ವಿತರಿಸಿದರು.

ತಮಿಳುನಾಡು ಸಿಎಂ ಊರಿನಲ್ಲಿ ಪತ್ತೆಯಾಯ್ತು 38 ಕಳವಾದ ವಾಹನ

ಕಳವು ಮಾಡಿದ್ದ ವಾಹನವನ್ನ ಆರೋಪಿಗಳು ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿಗಳ ಊರಾದ ಯಡಪ್ಪಾಡಿಯಲ್ಲೆ 39 ಬುಲೆಟ್ ಬೈಕ್​ಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕುರಿತು ಬರೋಬ್ಬರಿ 39 ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸದ್ಯ ಮಾಲೀಕರಿಗೆ ಬೈಕ್​ಗಳನ್ನ ಪೊಲೀಸರು ಹಸ್ತಾಂತರ ಮಾಡಿದ್ದು, ಇದರಿಂದಾಗಿ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಕರಣದಲ್ಲಿ ಕೇವಲ ಕದ್ದ ಆರೋಪಿಗಳನ್ನ ಬಂಧನ ಮಾಡಿರುವುದರ ಜೊತೆಗೆ ಖರೀದಿಸಿದವರ ಕೈಗೂ ಕೋಳ ತೊಡಿಸಿ ಜೈಲಿಗಟ್ಟಲಾಗಿದೆ.

ABOUT THE AUTHOR

...view details