ಬೆಂಗಳೂರು : ಬೆಂಗಳೂರುನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿಗೆ ಕೂಲ್ಡ್ರಿಂಕ್ಸ್ ಹಾಗೂ ಬಿಸ್ಕೇಟ್ ಕೊಡುವ ನೆಪದಲ್ಲಿ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ.
ರೈಲ್ವೆ ಪ್ರಯಾಣಿಕರೇ ಎಚ್ಚರಿಕೆ... ಕೂಲ್ಡ್ರಿಂಕ್ಸ್ ಕೊಡ್ತಾರೆ, ನಿಮ್ ಬ್ಯಾಗ್‌ನ ಎಗರಿಸ್ತಾರೆ ಖದೀಮರು..
ಬೆಂಗಳೂರಿನಿಂದ ದೆಹಲಿಗೆ ಹೋಗುತ್ಕೆತಿದ್ದ ಕೆ ಕೆ ಎಕ್ಸ್ಪ್ರೆಸ್ನಲ್ಲಿ ರಫೀಕ್ ಆಸೀಫ್, ಮುಸ್ತಾಕ್, ಮೊಹ್ಮದ್ ತಾಕೀರ್, ಮೊಹಮ್ಮದ್ ಸಾಹಿದಿ ಎಂಬುವರು ಪ್ರಯಾಣಿಸುತ್ತಿದ್ರು. ಈ ವೇಳೆ ನಾಲ್ಕು ಜನ ಪ್ರಯಾಣಿಕರು ರಫೀಕ್ ಕುಟುಂಬ ಕೂತ ಸ್ಥಳಕ್ಕೆ ಬಂದು ಕೂಲ್ ಡ್ರಿಂಕ್ಸ್ ಹಾಗೂ ಬಿಸ್ಕೆಟ್‌ನ ನೀಡಿದ್ದಾರೆ. ಇದನ್ನ ಸೇವಿಸಿದ ರಫೀಕ್ ಹಾಗೂ ನಾಲ್ವರು ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಇದನ್ನೇ ಕಾದು ಕುಳಿತ ಕಳ್ಳರು ರಫೀಕ್, ಆಸೀಫ್, ಮೊಹ್ಮದ್ ತಾಕೀರ್, ಮೊಹ್ಮದ್ ಸಾಹಿದಿ ಬಳಿ ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.
ಕೆ ಕೆ ಎಕ್ಸ್ಪ್ರೆಸ್ನಲ್ಲಿ ರಫೀಕ್ ಆಸೀಫ್, ಮುಸ್ತಾಕ್, ಮೊಹ್ಮದ್ ತಾಕೀರ್, ಮೊಹ್ಮದ್ ಸಾಹಿದಿ ಎಂಬುವರು ಪ್ರಯಾಣಿಸುತ್ತಿದ್ರು. ಈ ವೇಳೆ ನಾಲ್ಕು ಜನ ಪ್ರಯಾಣಿಕರು ರಫೀಕ್ ಕುಟುಂಬ ಕೂತ ಸ್ಥಳಕ್ಕೆ ಬಂದು ಕೂಲ್ ಡ್ರಿಂಕ್ಸ್ ಹಾಗೂ ಬಿಸ್ಕೇಟ್‌ನ ನೀಡಿದ್ದಾರೆ. ಇದನ್ನ ಸೇವಿಸಿದ ರಫೀಕ್ ಹಾಗೂ ನಾಲ್ವರು ಪ್ರಜ್ಞೆತಪ್ಪಿ ಬಿದ್ದಿದ್ದಾರೆ.
ಇದನ್ನೇ ಕಾದು ಕುಳಿತ ಕಳ್ಳರು ರಫೀಕ್, ಆಸೀಫ್, ಮೊಹ್ಮದ್ ತಾಕೀರ್, ಮೊಹ್ಮದ್ ಸಾಹಿದಿ ಬಳಿ ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ. ಇದನ್ನ ಮೊಹ್ಮದ್ ಸಾಹಿದಿ ನೋಡಿದಾಗ ತಮ್ಮ ಬಳಿ ಇದ್ದ ಬ್ಯಾಗ್, ಸುಮಾರು ಒಂದು ಲಕ್ಷ ಬೆಲೆ ಬಾಳುವ ವಸ್ತು, ನಗದು, ಆಧಾರ್ ಕಾರ್ಡ್, ಪ್ಯಾನ್‌ಕಾರ್ಡ್ ಹಾಗೂ ಬ್ಯಾಗ್‌ನಲ್ಲಿದ್ದ ಕ್ಯಾಶ್ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಬೆಂಗಳೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.