ಬೆಂಗಳೂರು:ಗರುಡಾಚಾರ್ ಪಾಳ್ಯದಲ್ಲಿ ಸಚಿವ ಎಂಟಿಬಿ ಒಡೆತನದ ಕಟ್ಟಡದಲ್ಲಿರುವ ಸಾಯಿ ಪೇಯಿಂಗ್ ಗೆಸ್ಟ್ (ಪಿ.ಜಿ) ಹೇಳೋರಿಲ್ಲ, ಕೇಳೋರಿಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ರಾತ್ರೋರಾತ್ರಿ ಈ ಕಟ್ಟಡದೊಳಗೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಚಿವ ಎಂಟಿಬಿ ಮಾಲೀಕತ್ವದ ಕಟ್ಟದಲ್ಲಿರುವ ಪಿಜಿಯಲ್ಲಿ ಕಳ್ಳನ ಕೈಚಳಕ - ಬೆಂಗಳೂರು ಅಪರಾಧ ಸುದ್ದಿ,
ಸಚಿವ ಎಂಟಿಬಿ ಮಾಲೀಕತ್ವದ ಕಟ್ಟದಲ್ಲಿದ್ದ ಪಿಜಿಯಲ್ಲಿ ಕಳ್ಳನೊಬ್ಬ ಕೈಚಳಕ ತೋರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯ
ನಗರದಲ್ಲಿ ದಿನೇ ದಿನೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮೊಬೈಲ್, ಲ್ಯಾಪ್ ಟಾಪ್‌ಗಳಿಗೆ ಕಣ್ಣು ಹಾಕುವ ಕಳ್ಳರು ಪಿಜಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಕಳೆದ ತಿಂಗಳ 25 ರಂದು ಮಧ್ಯರಾತ್ರಿ 3 ಗಂಟೆಗೆ ನಡೆದ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 2, 2021, 12:55 AM IST