ಬೆಂಗಳೂರು: ಮನೆ ಕೆಲಸಕ್ಕಿದ್ದ ಇಬ್ಬರು ಯುವತಿಯರು ಬೆಲೆ ಬಾಳುವ ಆಭರಣ ದೋಚಿ ಎಸ್ಕೇಪ್ ಆಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಉಂಡ ಮನೆಗೆ ಕನ್ನ ಹಾಕಿದ ಯುವತಿಯರು: ಬೆಲೆ ಬಾಳುವ ಆಭರಣ ಕದ್ದು ಎಸ್ಕೇಪ್ - ಬೆಂಗಳೂರಿನಲ್ಲಿ ಕಳ್ಳತನ
ಮನೆ ಕೆಲಸದ ಇಬ್ಬರು ಯುವತಿಯರು ಉಂಡ ಮನೆಗೆ ಕನ್ನ ಹಾಕಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ರಿಚ್‌ಮಂಡ್ ಟೌನ್ ಬಳಿ ಫಾತಿಮಾ ರಜ್ಜನ್ ಹಾಗೂ ಇಲಿಯಾಸ್ ರಜ್ಜನ್ ದಂಪತಿ ವಾಸವಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಮನೆಯಲ್ಲಿ ರಾಧಾ ಹಾಗೂ ತಸ್ಮಿಯಾ ಎಂಬ ಇಬ್ಬರು ಯುವತಿಯರನ್ನ ಕೆಲಸಕ್ಕೆ ಇಟ್ಟುಕೊಂಡಿದ್ದರು. ಆದರೆ, ರಾಧಾ ಹಾಗೂ ತಸ್ಮಿಯಾ ಅತ್ಯಂತ ಆಪ್ತರಂತೆ ನಟಿಸಿ ಮನೆಯ ಎಲ್ಲ ವಿಚಾರ ತಿಳಿದು ಕಳೆದ 18ರಂದು 1ಲಕ್ಷ ಬೆಲೆಬಾಳುವ ಚಿನ್ನದ ಸರ, 5 ಲಕ್ಷ ರೂ. ಮೌಲ್ಯದ ವಜ್ರದ ಬಳೆ ಕದ್ದು ಪರಾರಿಯಾಗಿದ್ದಾರೆ.
ನಂತರ ಫಾತಿಮಾ ರಜ್ಜನ್ ಜೊತೆ ಆಪ್ತರಂತೆ ನಟಿಸಿ ಇಬ್ಬರು ಒಂದೊಂದು ಕಾರಣ ಹೇಳಿ ನಯವಾಗಿ ಮನೆಯಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಚಿನ್ನಾಭರಣ ಕಳ್ಳತನವಾಗಿರುವ ವಿಚಾರ ಗೊತ್ತಾಗಿ ಸದ್ಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.