ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮನೆಯ ಕಾವಲಿಗೆ ನೇಮಕವಾಗುವ ಸೆಕ್ಯೂರಿಟಿ ಗಾರ್ಡ್ ಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲಿ ಕೆಲವು ಸೆಕ್ಯೂರಿಟಿ ಗಾರ್ಡ್ಗಳು ನಾನಾ ಅಪರಾಧಗಳಲ್ಲಿಯೂ ತೊಡಗಿದ್ದು ಉಂಟು. ಕೆಲವು ಜನ ಉಂಡ ಮನೆಗೆ ಕನ್ನಹಾಕಿದ್ದು ನೋಡಿದಿವಿ. ಇದೀಗ ಅಂಥಹದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನೇಪಾಳಿ ಮೂಲದವರನ್ನು ಸೆಕ್ಯೂರಿಟಿಗಾಗಿ ನೇಮಕ ಮಾಡಿಕೊಳ್ಳುವುದು ಜಾಸ್ತಿ ಆಗಿದೆ. ಕಡಿಮೆ ಸಂಬಳ ಅಂತಾ ನೇಪಾಳ ಮೂಲದ ಸೆಕ್ಯೂರಿಟಿಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಪೊಲೀಸರು ಬೆಂಗಳೂರು ನಿವಾಸಿಗಳಿಗೆ ಎಷ್ಟೇ ಬಾರಿ ಎಚ್ಚರಿಕೆ ಮಾಹಿತಿ ಕೊಟ್ಟರೂ ಅದೇ ಕೆಲಸ ಮುಂದುವರಿಸುತ್ತಿದ್ದಾರೆ.
ಇದೀಗ ನಗರದ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸರಿ ಸುಮಾರು 10 ರಿಂದ 12 ವರ್ಷ ನಂಬಿಕೆಯಿಂದ ಇದ್ದು. ಮನೆಯ ಕಾವಲುಗಾರರಾಗಿದ್ದ ನೇಪಾಳ ಮೂಲದ ಸೆಕ್ಯೂರಿಟಿ ದಂಪತಿ. ಮನೆಯಲ್ಲಿ ಯಾರೂ ಇಲ್ಲದ ಸಮುಯದಲ್ಲಿ ಹಣ ಕದ್ದು ಪರಾರಿ ಆಗಿದ್ದಾರೆ.
ಸೆಕ್ಯೂರಿಟಿ ದಂಪತಿ ಕದ್ದು ಪರಾರಿ: ಇಷ್ಟಕ್ಕೂ ಈ ರಾಬರಿ ಮಾಡಿದ್ದು ಬೇರೆ ಯಾರೋ ಅಲ್ಲ, ಇದೇ ಮನೆಯಲ್ಲಿ 9 ವರ್ಷದಿಂದ ಸೆಕ್ಯುರಿಟಿ ಗಾರ್ಡ ಆಗಿ ಕೆಲಸಕ್ಕೆ ಅಂತ ಸೇರಿಕೊಂಡಿದ್ದ ನೇಪಾಳ ಮೂಲದ ಶಿವರಾಜ್ ಹಾಗೂ ಆತನ ಹೆಂಡತಿ. ಈ ಸೆಕ್ಯೂರಿಟಿ ದಂಪತಿಗಳೇ ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ನ್ನು ನೊಡಿಕೊಳ್ಳುತ್ತಿದ್ದರು. ಆದರೆ ಈ ಅಪಾರ್ಟ್ಮೆಂಟ್ ನಲ್ಲಿ ಒಂದನೇ ಮಹಡಿಯಲ್ಲಿ ವಾಸವಿದ್ದ ಬ್ಯುಜಿನೆಸ್ ಮೆನ್ ದಂಪತಿ ಅವರು ಹೊಸ ವರ್ಷಾಚರಣೆಗಾಗಿ ಕೊಡಗಿಗೆ ಹೋಗಿದ್ದರು. ಇದನ್ನೂ ಗಮನಿಸಿದ ಈ ಸೆಕ್ಯೂರಿಟಿ ದಂಪತಿ ಕಳ್ಳತನ ಕೃತ್ಯ ಮಾಡಿ ಪರಾರಿಯಾಗಿದ್ದಾರೆ. ಇನ್ನು ಕಳ್ಳತನ ಆದ ದಿನದಿಂದ ಅವರು ತಲೆಮರೆಸಿಕೊಂಡಿದ್ದರು. ಸೆಕ್ಯೂರಿಟಿ ದಂಪತಿ ಮೇಲೆ ಉದ್ಯಮಿ ದಂಪತಿಗೆ ಅನುಮಾನ ಮೂಡಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚನೆ : ಕಳ್ಳತನ ಪ್ರಕರಣಕ್ಕೆ ಸಂಬಧಿಸಿದಂತೆ ಇತ್ತೀಚೆಗೆ ಜಾಲಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಜಾಲಹಳ್ಳಿಯ ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ದಲ್ಲಿ ಮೊದಲಿನ ಮಹಡಿಯಲ್ಲಿದ್ದ ಉದ್ಯಮಿ ದಂಪತಿ ಹಿಂದಿನ ತಿಂಗಳು ಡಿ 28ರಂದು ಹೊಸ ವರ್ಷದ ಪ್ರಯುಕ್ತ ಹೊರಗೆಡೆ ಪ್ರವಾಸಕ್ಕೆ ಹೋಗಿದ್ದರು. ಆ ದಂಪತಿ ಆದರೆ 31ರಂದು ಬಂದು ನೋಡಿದಾಗ, ಮನೆಯಲ್ಲಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಕಳ್ಳತನದ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ, 29ರಂದು ಸೆಕ್ಯೂರಿಟಿ ದಂಪತಿ ಪರಾರಿಯಾಗಿರುವ ಕುರಿತಾಗಿ ಮಾಹಿತಿ ಬಂದಿದೆ. ತಕ್ಷಣ ಬ್ಯುಸಿನೆಸ್ ಮೆನ್ ಅವರು, ಮನೆಯಲ್ಲಿ ಅಂದಾಜು 800ರಿಂದ 850 ಗ್ರಾಂ ಚಿನ್ನಾಭರಣ ಕಳವು ಆಗಿರುವ ಕುರಿತಾಗಿ ಶಂಕಿತ ಸೆಕ್ಯೂರಿಟಿ ದಂಪತಿ ವಿರುದ್ಧ ಜನವರಿ 2ರಂದು ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೆಂಗಳೂರಿನ ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ ದಲ್ಲಿ 9 ವರ್ಷದಿಂದ ಸೆಕ್ಯೂರಿಟಿ ಗಾರ್ಡ ಆಗಿ ನೇಪಾಳ ಮೂಲದ ಶಿವರಾಜ್ ಹಾಗೂ ಆತನ ಹೆಂಡತಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಪಾರ್ಟ್ಮೆಂಟ್ನ ಒಂದನೇ ಮಹಡಿಯಲ್ಲಿ ವಾಸವಾಗಿದ್ದ ದಂಪತಿ ಮನೆಯಲ್ಲಿ ಸೆಕ್ಯೂರಿಟಿ ಪತ್ನಿ ಮನೆಗೆಲಸ ಮಾಡುತ್ತಿದ್ದರು. ಈ ದಂಪತಿ ಕೊಡಗಿಗೆ ಹೋಗಿರೋದನ್ನು ಗಮನಿಸಿದ ಸೆಕ್ಯೂರಿಟಿ ದಂಪತಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸೆಕ್ಯೂರಿಟಿ ದಂಪತಿ ಡಿ.29ರಿಂದ ತಲೆಮೆರಿಸಿಕೊಂಡಿದ್ದರಿಂದ ಶಂಕೆ ವ್ಯಕ್ತಪಡಿಸಿದ ಬ್ಯುಸಿನೆಸ್ ಮೆನ್ ದೂರು ದಾಖಲಿಸಿದ್ದಾರೆ.
ಆದರೆ ಇನ್ನೂ ಕಳ್ಳತನ ಆಗಿದ್ದ ದಿನದಿಂದ ಸೆಕ್ಯೂರಿಟಿ ದಂಪತಿ ತಲೆಮರೆಸಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಿಶೇಷ ತಂಡಗಳ ರಚನೆ ಮಾಡಿ, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂಓದಿ:ಪೊಲೀಸ್ ವಶದಲ್ಲಿರುವಾಗಲೇ ಠಾಣೆಯಲ್ಲಿ ಆರೋಪಿ ಸಾವು: ಮೃತನ ಕುಟುಂಬಸ್ಥರ ಆರೋಪಕ್ಕೆ ಪೊಲೀಸರು ಹೇಳಿದ್ದೇನು?