ಬೆಂಗಳೂರು: ಯುಬಿ ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅದೇ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಐಫೋನ್ ಕಳ್ಳತನ ಮಾಡಿ ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದಾನೆ.
ಐಫೋನ್ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ: ಸೆಕ್ಯೂರಿಟಿ ಗಾರ್ಡ್ ಬಂಧನ - bangalore crime
ಉತ್ತರ ಭಾರತ ಮೂಲದ ಜಗದೀಶ್ ಪಾಲೈ ಎಂಬ ವ್ಯಕ್ತಿ ಯುಬಿ ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆತ ಕಂಪನಿಯ ಉದ್ಯೋಗಿಗಳು ಬಳಸುತ್ತಿದ್ದ ಐ ಫೋನ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ.
ಉತ್ತರ ಭಾರತ ಮೂಲದ ಜಗದೀಶ್ ಪಾಲೈ ಬಂಧಿತ ಆರೋಪಿ. ಯು.ಬಿ.ಸಿಟಿಯಲ್ಲಿರುವ ಕಂಪನಿಯೊಂದರಲ್ಲಿ ಕಳೆದ ಐದು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಂಪನಿಯ ಉದ್ಯೋಗಿಗಳು ಬಳಸುತ್ತಿದ್ದ ಐ ಫೋನ್ಗಳನ್ನು ಗುರಿಯಾಗಿಸಿಕೊಂಡು ಏಳು ಐಫೋನ್ ಎಗರಿಸಿದ್ದಾನೆ.
ಕದ್ದ ಮೊಬೈಲ್ಗಳನ್ನು ಎಸ್.ಜೆ.ಪಿ. ಕ್ಯಾಂಪಸ್ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜು ಬಳಿ ಮೊಬೈಲ್ಗಳನ್ನು ಮಾರಾಟ ಮಾಡಲು ಮುಂದಾಗಿದ್ದ. ಈ ವೇಳೆ ಅನುಮಾನಗೊಂಡು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬಹಿರಂಗಪಡಿಸಿದ್ದಾನೆ. ಸದ್ಯ ಆತನಿಂದ 4.5 ಲಕ್ಷ ರೂ. ಮೌಲ್ಯದ ಏಳು ಐಪೋನ್, ಒಂದು ಟ್ಯಾಬ್ ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.