ಬೆಂಗಳೂರು:ಕಾರಿನಲ್ಲಿ ಬಂದು ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸದ್ಯ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರಿನಲ್ಲಿ ಬಂದು ಕ್ಷಣದಲ್ಲೇ ಬಟ್ಟೆ ಕದ್ದೊಯ್ತಾರೆ: ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ - ಸಿಸಿಟಿವಿ
ನಾಲ್ವರು ಅಪರಿಚಿತರು ಮತ್ತಿಕೆರೆಯ ಎಕ್ಸ್ ಮ್ಯಾನ್ ಫ್ಯಾಷನ್ ಹಬ್ ಅಂಗಡಿಯ ಶೆಟರ್ ತೆಗೆದು 150 ಪ್ಯಾಂಟ್ ಹಾಗೂ 30 ಟೀ ಶರ್ಟ್ ಗಳನ್ನು ಕದ್ದೊಯ್ದಿದ್ದಾರೆ.
ಎಕ್ಸ್ ಮ್ಯಾನ್ ಫ್ಯಾಷನ್ ಹಬ್
ಕಾರಿನಲ್ಲಿ ಬಂದಿರುವ ನಾಲ್ವರು ಖದೀಮರು ಮತ್ತಿಕೆರೆಯ ಎಕ್ಸ್ ಮ್ಯಾನ್ ಫ್ಯಾಷನ್ ಹಬ್ ಅಂಗಡಿಯ ಶೆಟರ್ ತೆಗೆದು ನಂತರ ಒಳಹೋಗಿ 150 ಪ್ಯಾಂಟ್ ಹಾಗೂ 30 ಟೀ ಶರ್ಟ್ ಗಳನ್ನು ಕದ್ದೊಯ್ದಿದ್ದಾರೆ.
ಇನ್ನು, ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಲ್ವರು ಆರೋಪಿಗಳು ಕಾರಿನಲ್ಲಿ ಬಂದು ಯಾರಿಗೂ ಅನುಮಾನ ಬಾರದ ರೀತಿ ನಾಟಕವಾಡಿ ನಂತರ ಅಂಗಡಿ ಶೆಟರ್ ತೆಗೆದಿದ್ದಾರೆ. ಸದ್ಯ ಅಂಗಡಿ ಮಾಲೀಕರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.