ಬೆಂಗಳೂರು: ನಂಬಿಕೆಯ ಪ್ರಕಾರ ಆಷಾಢ ಶುದ್ಧ ಏಕಾದಶಿಯ ಪ್ರಯುಕ್ತ ತಪ್ತ ಮುದ್ರಾಧಾರಣೆ ಮಾಡಿಕೊಳ್ಳಬೇಕು. ಆದರೆ ಮಹಾಮಾರಿಯ ಕಾರಣದಿಂದ ಮುದ್ರಾಧಾರಣೆ ಆಗಿಲ್ಲ ಎಂದು ಭಕ್ತರು ನಿರಾಸೆಗೆ ಒಳಗಾಗಬಾರದು ಎಂದು ವ್ಯಾಸರಾಜ ಮಠ (ಸೋಸಲೇ) ವಿದ್ಯಾಶ್ರೀಶ ತೀರ್ಥರು ಹೇಳಿದ್ದಾರೆ.
ಪ್ರಥಮ ಏಕಾದಶಿ ಮುದ್ರಾಧಾರಣೆಯಿಲ್ಲವೆಂದು ನಿರಾಸೆ ಬೇಡ: ವ್ಯಾಸರಾಜ ಮಠದ ಶ್ರೀಗಳು - Bangalore latest news
ವಿಶ್ವವೇ ಕೊರೊನಾದಿಂದ ಬಳಲುತ್ತಿರುವ ಸಂದರ್ಭದಲ್ಲಿ ರಾಜ್ಯದ ಯಾವುದೇ ಮಾಧ್ವ ಮಠಗಳು ಮುದ್ರಾಧಾರಣೆ ಮಾಡುತ್ತಿಲ್ಲ. ಭಗವಂತನ ಅನುಗ್ರಹದಿಂದ ಈ ದುರವಸ್ಥೆ ಕಾಲ ಮುಗಿದ ನಂತರ ಮುದ್ರಾಧಾರಣೆ ಕಾರ್ಯಕ್ರಮ ನಡೆಯಬಹುದು ಎಂದು ವಿದ್ಯಾಶ್ರೀಶ ತೀರ್ಥರು ಹೇಳಿದರು.
ವ್ಯಾಸರಾಜ ಮಠದ ಶ್ರೀಗಳು
ಇಂದು ಮಾಧ್ವ ಸಂಪ್ರದಾಯದ ಪ್ರಕಾರ ಚಾತುರ್ಮಾಸದ ಮುನ್ನ ಏಕಾದಶಿಯಂದು ಸುದರ್ಶನ ಹೋಮ ಮಾಡಿ, ಭಕ್ತರಿಗೆ ಮಠಗಳಲ್ಲಿ ಮುದ್ರಾಧಾರಣೆ ಮಾಡುವ ಪ್ರತೀತಿಯಿದೆ. ವಿಶ್ವವೇ ಕೊರೊನಾದಿಂದ ಬಳಲುತ್ತಿರುವ ಸಂದರ್ಭದಲ್ಲಿ ರಾಜ್ಯದ ಯಾವುದೇ ಮಾಧ್ವ ಮಠಗಳು ಮುದ್ರಾಧಾರಣೆ ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಮಾತನ್ನಾಡಿದ ಶ್ರೀಗಳು, ಭಗವಂತನ ಅನುಗ್ರಹದಿಂದ ಈ ದುರವಸ್ಥೆ ಕಾಲ ಮುಗಿದ ನಂತರ ಮುದ್ರಾಧಾರಣೆ ಕಾರ್ಯಕ್ರಮ ನಡೆಯಬಹುದು ಎಂದು ಹೇಳಿದರು.