ಬೆಂಗಳೂರು: ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ನಗರದೆಲ್ಲೆಡೆ ಗೊಂಬೆಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಮಾರುಕಟ್ಟೆಗೆ ವಿವಿಧ ವಿನ್ಯಾಸದ ಗೊಂಬೆಗಳು ಬಂದಿವೆ.
ವಿವಿಧ ಬಗೆಯ ದಸರಾ ಗೊಂಬೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜನರನ್ನು ಆಕರ್ಷಿಸುತ್ತಿವೆ. ಕೊರೊನಾ ನಡುವೆಯೂ ಗೊಂಬೆಗಳ ಮಾರಾಟ ಕೊಂಚ ಏರಿಕೆಯಾಗಿದೆ ಅಂತಾ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂಬಾರಿ, ಜಾತ್ರೆ, ಮೈಸೂರು ಮೆರವಣಿಗೆ, ದಶಾವತಾರ ಹೀಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಸಾರುವ ಗೊಂಬೆಗಳನ್ನು ಮಾರುಕಟ್ಟೆಗಳಲ್ಲಿ ಕಾಣಬಹುದು. ಆದ್ರೆ, ಈಗಿನ ಟ್ರೆಂಡ್‌ಗೆ ತಕ್ಕಂತೆ ದಸರಾ ಹಬ್ಬದ ಗೊಂಬೆಗಳ ವಿಭಿನ್ನ ಕಲೆಕ್ಷನ್ಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.