ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಇನ್ನಷ್ಟು ಸ್ಮಾರ್ಟ್​​ ಆಗಬೇಕಿದೆ ಸಿಗ್ನಲ್​ ಲೈಟ್​ - traffic rules violation

ವಿವಿಧ ಕಾರಣಗಳಿಂದ ಜನವರಿಯಿಂದ ನವೆಂಬರ್ ಅಂತ್ಯಕ್ಕೆ ನಗರದಲ್ಲಿ ನಡೆದಿರುವ 556 ರಸ್ತೆ ಅಪಘಾತ ಪ್ರಕರಣಗಳಿಂದ 580 ಜನರು ಮೃತಪಟ್ಟಿದ್ದಾರೆ. ಇದಕ್ಕೂ ಮುಂಚಿನ ವರ್ಷ 744 ಪ್ರಕರಣಗಳಿಂದ 744 ಮಂದಿ ಅಸುನೀಗಿದ್ದರು.

The traffic lights need to be smart
ಸ್ಮಾರ್ಟ್​​ ಆಗಬೇಕಿದೆ ಸಂಚಾರಿ ದೀಪಗಳು

By

Published : Jan 2, 2021, 5:14 PM IST

ಬೆಂಗಳೂರು:ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆಯೇ ಸಂಚಾರ ದಟ್ಟಣೆಯೂ ಉಲ್ಬಣಗೊಳ್ಳುತ್ತಿದೆ. ಇದರಿಂದ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೂಕಾಲು ಕೋಟಿಗಿಂತ ಹೆಚ್ಚು ಜನರಿರುವ ನಗರದಲ್ಲಿ ಸುಮಾರು 86 ಲಕ್ಷಕ್ಕೂ ಅಧಿಕ ವಾಹನಗಳಿವೆ. ಇಷ್ಟು ವಾಹನಗಳಿಗೆ ಕೇವಲ 353 ಸಿಗ್ನಲ್​​ ಲೈಟ್​​ಗಳು ಸಾಲದಾಗಿವೆ. ಇರುವ ಅಲ್ಪಸ್ವಲ್ಪವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ.

ಇದನ್ನೂ ಓದಿ...ಹಗಲು ವಾಷಿಂಗ್​ ಮಷಿನ್ ರಿಪೇರಿ, ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದಾತ ಅರೆಸ್ಟ್

ಪ್ರಮುಖ ಜಂಕ್ಷನ್ ಹಾಗೂ ಮುಖ್ಯ ರಸ್ತೆಗಳಲ್ಲಿ ಸಿಗ್ನಲ್​​ ಲೈಟ್​ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ಇನ್ನು ಕೆಲವೆಡೆ ಸಿಗ್ನಲ್ ಲೈಟ್​​​ಗಳಿದ್ದರೂ ನಿರ್ವಹಣೆಯೇ ಇಲ್ಲ. ಹೀಗಾಗಿ ಅಪಘಾತಗಳು ನಡೆಯುತ್ತಿವೆ. ಇದರ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ, ಬೆಂಗಳೂರು ವಿಷನ್-2020ರ ಯೋಜನೆಯಡಿ ಅತ್ಯಾಧುನಿಕ 100 ಸಿಗ್ನಲ್​​ ಲೈಟ್​ ಅಳವಡಿಕೆಗೆ ಅನುದಾನ ನೀಡಲು ಮುಂದಾಗಿದೆ.

ಸ್ಮಾರ್ಟ್​​ ಆಗಬೇಕಿದೆ ಸಿಗ್ನಲ್​ ಲೈಟ್​ಗಳು

ವಿವಿಧ ಕಾರಣಗಳಿಂದ ನವೆಂಬರ್ ಅಂತ್ಯಕ್ಕೆ ನಗರದಲ್ಲಿ ನಡೆದಿರುವ 556 ರಸ್ತೆ ಅಪಘಾತ ಪ್ರಕರಣಗಳಿಂದ 580 ಜನರು ಮೃತಪಟ್ಟಿದ್ದಾರೆ. ಇದಕ್ಕೂ ಮುಂಚಿನ ವರ್ಷ 744 ಪ್ರಕರಣಗಳಿಂದ 744 ಮಂದಿ ಅಸುನೀಗಿದ್ದರು. 2,362 ಮಾರಣಾಂತಿಕವಲ್ಲದ ಪ್ರಕರಣ ದಾಖಲಾಗಿ 2501 ಮಂದಿ ಗಾಯಗೊಂಡಿದ್ದಾರೆ. 804 ಚದರ ಕಿಲೋ ಮೀಟರ್​​ ವಿಸ್ತೀರ್ಣವಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಸಾವಿರಕ್ಕೂ ಅಧಿಕ ಹೈ ಟ್ರಾಫಿಕ್ ಜಂಕ್ಷನ್​ಗಳಿವೆ. ಈ ಭಾಗದಲ್ಲಿ ಕನಿಷ್ಠ 500ಕ್ಕೂ ಹೆಚ್ಚು ಕಡೆ ಸಂಚಾರಿ ದೀಪಗಳು ಅಳವಡಿಸಬೇಕಿದ್ದು, ತಕ್ಕಮಟ್ಟಿಗೆ ದಟ್ಟಣೆ ಸುಧಾರಣೆ ಕಾಣಲಿದೆ.

ಈ ಕುರಿತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್.ರವಿಕಾಂತೇಗೌಡ ಅವರನ್ನು ಕೇಳಿದ್ರೆ, ನಗರದಲ್ಲಿ ಸಂಚಾರಿ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆ. ದುರಸ್ತಿಯಾದರೆ ತ್ವರಿತಗತಿಯಲ್ಲಿ ಸರಿಪಡಿಸಲಾಗುತ್ತಿದೆ ಎನ್ನುತ್ತಾರೆ. ಅಗತ್ಯ ಸ್ಥಳಗಳಲ್ಲಿ ಸಂಚಾರಿ ದೀಪಗಳನ್ನು ಅಳವಡಿಸಿ ಮುಂದಾಗುವ ಅನಾಹುತ ಮತ್ತು ಸಂಚಾರ ದಟ್ಟಣೆ ತಗ್ಗಿಸಲು ಸಂಚಾರಿ ಪೊಲೀಸ್​ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ABOUT THE AUTHOR

...view details