ಕರ್ನಾಟಕ

karnataka

ETV Bharat / state

ವಿಧಾನಸೌಧ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಬಂಧನ - ಈಟಿವಿ ಭಾರತ ಕನ್ನಡ

ಬಾಂಬ್​ ಹಾಕಿ ವಿಧಾನಸೌಧ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಸಾಫ್ಟ್​ವೇರ್​ ಇಂಜಿನಿಯರ್​ ನನ್ನು ಪೊಲೀಸರು ಬಂಧಿಸಿದ್ದಾರೆ

the-techie-who-threatened-to-blow-up-the-vidhana-soudha-was-arrested
ವಿಧಾನಸೌಧ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಬಂಧನ

By

Published : Oct 8, 2022, 8:57 PM IST

ಬೆಂಗಳೂರು : ಬಾಂಬ್‌ ಹಾಕಿ ವಿಧಾನಸೌಧವನ್ನು ಕೆಲವೇ ಕ್ಷಣಗಳಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಸಾಫ್ಟ್‌ ವೇರ್‌ ಇಂಜಿನಿಯರ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಪರಪ್ಪನ ಅಗ್ರಹಾರ ಬಳಿಯ ನಿವಾಸಿ ಸಾಫ್ಟ್‌ ವೇರ್‌ ಇಂಜಿನಿಯರ್ ಪ್ರಶಾಂತ್ ಬಂಧಿತ ಆರೋಪಿಯಾಗಿದ್ದಾನೆ.

ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆ ಅವಧಿಯಲ್ಲಿ ಮೂರು ಬಾರಿ ಕರೆ ಮಾಡಿದ್ದ ಟೆಕ್ಕಿ, ವಿಧಾನಸೌಧದ ಎರಡು ಕಡೆ ಬಾಂಬ್ ಇರಿಸಲಾಗಿದ್ದು, ಸದ್ಯದಲ್ಲೇ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ತಪಾಸಣೆ : ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕೂಡಲೇ ತಪಾಸಣೆ ನಡೆಸಲಾಗಿತ್ತು. ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂದು ತಿಳಿದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಫೋನ್‌ ಕರೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ತಡರಾತ್ರಿ ಪರಪ್ಪನ ಅಗ್ರಹಾರದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಖಿನ್ನತೆಗೊಳಗಾಗಿದ್ದ ಆರೋಪಿ : ಪ್ರಶಾಂತ್ ಇಬ್ಬರ ಜೊತೆಗೆ ಲಿವಿಂಗ್ ಟುಗೇದರ್‌ ಸಂಬಂಧ ಹೊಂದಿದ್ದು, ಈ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿದ್ದ. ಅಪರಿಚಿತರಿಂದ ನನಗೆ ತೊಂದರೆ ಆಗುತ್ತಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದ. ಆದರೆ, ಯಾರೂ ಆತನ ನೆರವಿಗೆ ಬಂದಿರಲಿಲ್ಲ. ಇದರಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಗೆಳತಿ, ಆಕೆಯ ತಾಯಿಯೊಂದಿಗೂ ಸಂಬಂಧ: ನಶೆಯಲ್ಲಿ ಮನೆಗೆ ತೆರಳಿ ಶವವಾದ ಯುವಕ

ABOUT THE AUTHOR

...view details