ಆನೇಕಲ್: ಆನೇಕಲ್ ತಾಲೂಕು ಪಂಚಾಯಿತಿಯ ಮುಂದೆ, ತಾಲೂಕು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ತಮಟೆ ಚಳುವಳಿ ಮಾಡಿದರು. ಬನ್ನೇರುಗಟ್ಟದ ಗ್ರಾಮ ಪಂಚಾಯಿತಿಯ ಪಿಡಿಓ ರವಿಕುಮಾರ್ ಹಾಗೂ ಚಂದಾಪುರ ಕಂದಾಯ ಅಧಿಕಾರಿ ಮಂಜುನಾಥರೆಡ್ಡಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಪ್ರತಿ ಕೆಲಸಕ್ಕೂ ಲಂಚ ಕೇಳುತ್ತಾರೆಂದು ಆರೋಪಿಸಿ, ಪ್ರತಿಭಟನೆ ನಡೆಸಿದರು.
ಆನೇಕಲ್ನಲ್ಲಿ ಭ್ರಷ್ಟಾಚಾರದ ವಿರುದ್ಧ ತಮಟೆ ಚಳವಳಿ - The Tamate Movement Against Corruption at Anekal
ಆನೇಕಲ್ ತಾಲೂಕು ಪಂಚಾಯಿತಿಯ ಮುಂದೆ, ತಾಲೂಕು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ತಮಟೆ ಚಳುವಳಿ ಮಾಡಿದರು.
The Tamate Movement
ತಾಲೂಕು ಕಚೇರಿ, ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಲಂಚವಿಲ್ಲದೆ ಕೆಲಸವಾಗಲ್ಲ. ಹುಲಿಮಂಗಲದ ಸರ್ವೆ ನಂಬರ್ 155ರಲ್ಲಿ ಶಿರಡಿ ಸಾಯಿಬಾಬಾ ದೇವಾಲಯ ನಿರ್ಮಿಸಿ ಹಣ ವಸೂಲಿಯಲ್ಲಿ ತೊಡಗಿರುವವರ ಕಾಟ ಹೆಚ್ಚಾಗಿದೆ. ನಗರ ಜಿಲ್ಲಾಧಿಕಾರಿ ಹಾಗೂ ಕೋರ್ಟ್ನ ಆದೇಶವಿದ್ದರೂ ಸರ್ಕಾರಿ ಜಮೀನು ಖಾಲಿ ಮಾಡಿಸುವಲ್ಲಿ ಆಡಳಿತ ವಿಫಲಾವಾಗಿದೆ ಎಂದು ಆರೋಪಿಸಿದರು. ಈ ಕುರಿತು ವಿಶೇಷ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
TAGGED:
ಪ್ರಜಾ ವಿಮೋಚನಾ ಚಳವಳಿ