ಬೆಂಗಳೂರು:ಹೊಸ ವರ್ಷಕ್ಕೆ ಸ್ವಾಗತ ಕೋರಿ ಪ್ರಧಾನಿ ನರೇಂದ್ರ ಮೋದಿ ಕವನ ಬರೆದಿರುವುದನ್ನು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಲೇವಡಿ ಮಾಡಿದ್ದಾರೆ.
ಈಗಷ್ಟೇ ಸೂರ್ಯ ಉದಯಿಸಿದೆ ಎಂಬ ಶೀರ್ಷಿಕೆಯಡಿ ಪ್ರಧಾನಿ ನರೇಂದ್ರ ಮೋದಿ 2021ನೇ ವರ್ಷವನ್ನು ಸ್ವಾಗತಿಸಿ ಕವನ ಬರೆದಿದ್ದಾರೆ. ಇದನ್ನು ಮಹದೇವಪ್ಪ ಅವರು ಲೇವಡಿ ಮಾಡಿ, ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಆದರೆ, ದೇಶವು ಆಂತರಿಕವಾಗಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕುಸಿಯುತ್ತಿರುವುದಕ್ಕೆ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರವಿಯೂ ಅಲ್ಲ ಕವಿಯೂ ಅಲ್ಲ!! ಎಂದು ವ್ಯಂಗ್ಯವಾಡಿದ್ದಾರೆ.