ಬೆಂಗಳೂರು:ಖಾಲಿ ಆಗಿದ್ಯಾ ರಾಜ್ಯದ ಬೊಕ್ಕಸ? ನೆರೆ ಹಾಗೂ ಬರ ಪೀಡಿತರಿಗೆ ಪರಿಹಾರ ನೀಡೋದಕ್ಕೆ ಸಾಧ್ಯವಿಲ್ಲವೇ? ರಾಜ್ಯ ಬಿಜೆಪಿಯ ಟ್ವೀಟ್ ಇಂತಹದ್ದೊಂದು ಪ್ರಶ್ನೆ ಹುಟ್ಟುವಂತೆ ಮಾಡಿದೆ.
ರಾಜ್ಯದ ಬೊಕ್ಕಸ ಖಾಲಿಯಾಗಲು ಸಿದ್ದರಾಮಯ್ಯ ಕಾರಣ?: ಹೀಗೊಂದು ಪ್ರಶ್ನೆ ಹುಟ್ಟು ಹಾಕಿದೆ ಬಿಜೆಪಿ ಟ್ವೀಟ್ - Bjp tweeted
ರಾಜ್ಯದ ಖಜಾನೆ ಖಾಲಿ ಆಯ್ತಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದ್ದು, ಈ ರೀತಿಯ ಪ್ರಶ್ನೆ ಉದ್ಬವಿಸಲು ಬಿಜೆಪಿ ಟ್ವೀಟ್ ಕಾರಣ

ಬಿಜೆಪಿ ಟ್ವೀಟ್
ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ ಸಿದ್ದರಾಮಯ್ಯ ಅವರೇ? ಐದು ವರ್ಷ ಸ್ವತಂತ್ರವಾಗಿ ಸರ್ಕಾರ ನಡೆಸಿದ್ದು ನಂತರ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿಗೈದದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನತೆಗೆ ತಿಳಿದೇ ಇದೆ ಎಂದು ಟ್ವೀಟ್ ಮಾಡುವ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಿಜೆಪಿ ಕರ್ನಾಟಕ ಟ್ವಿಟ್ಟರ್ ಪೇಜ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುವ ಮೂಲಕ ಖಜಾನೆಯಲ್ಲಿ ಹಣವಿಲ್ಲ ಎನ್ನುವ ಮಾಹಿತಿಯನ್ನು ಬಿಜೆಪಿಯೇ ಹೊರಹಾಕಿದಂತಾಗಿದೆ.