ಕರ್ನಾಟಕ

karnataka

ETV Bharat / state

ತೌಕ್ತೆ ಚಂಡಮಾರುತ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧ - ‘ತೌಕ್ತೆ ಚಂಡಮಾರುತ

ಈಗಾಗಲೇ ರಾಜ್ಯದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಎರಡು ಎನ್​ಡಿಆರ್​ಎಫ್ ತಂಡಗಳು ಬಂದಿವೆ. ದಕ್ಷಿಣ ಕನ್ನಡ, ಕೊಡಗಿನಲ್ಲಿ ಒಂದೊಂದು ತಂಡ ಇರಲಿವೆ. ಇವುಗಳ ಜತೆಗೆ ನಮ್ಮ ಎಸ್​ಡಿಆರ್​ಎಫ್ ತಂಡ ಸೇರಲಿದೆ. ಮೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಯಾವೊಬ್ಬ ಅಧಿಕಾರಿಗೂ ರಜೆಯಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅಲರ್ಟ್ ಘೋಷಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ರು.

ತೌಕ್ತೆ ಚಂಡಮಾರುತ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧ..!
ತೌಕ್ತೆ ಚಂಡಮಾರುತ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧ..!

By

Published : May 15, 2021, 7:29 PM IST

ಬೆಂಗಳೂರು: ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ತೌಕ್ತೆ ಚಂಡಮಾರುತ ಕುರಿತಂತೆ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಆರ್. ಅಶೋಕ್​ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕಂದಾಯ ಸಚಿವ ಆರ್​. ಅಶೋಕ್ ಮಾತನಾಡಿ, ತೌಕ್ತೆ ಚಂಡಮಾರುತ ಲಕ್ಷದ್ವೀಪ ಕೇಂದ್ರೀಕೃತವಾಗಿದೆ. ರಾಜ್ಯದಿಂದ ಕೇವಲ 200 ಕಿಮೀ ಅಂತರದಲ್ಲಿದೆ. ಹೀಗಾಗಿ ಮೇ 18 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸಲಹೆ ನೀಡಿದರು.

ತೌಕ್ತೆ ಚಂಡಮಾರುತ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧ..!

ಹವಾಮಾನ ಇಲಾಖೆಯು ಚಂಡಮಾರುತದ ಬಗ್ಗೆ ಪ್ರತಿ ನಿಮಿಷವೂ ನಿಗಾ ಇಟ್ಟಿದೆ. ಇಂದು ರಾತ್ರಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ತೌಕ್ತೆಯು ಗಂಟೆಗೆ 60 ಕಿಲೋ ಮೀಟರ್​ ವೇಗದಲ್ಲಿ ಬೀಸಲಿದೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಲಾಗಿದೆ.

ಮೂರು ಜಿಲ್ಲೆಗಳಲ್ಲಿ 8 ರಿಲೀಫ್ ಕ್ಯಾಂಪ್​ ನಿರ್ಮಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದವರಿಗೆ ಪುನರ್​ವ್ಯವಸ್ಥೆ ಮಾಡಲಾಗುತ್ತದೆ. ಆ ಕ್ಯಾಂಪ್​ಗಳಲ್ಲಿ 10 ಸಾವಿರ ಜನರಿಗೆ ಆಶ್ರಯ ನೀಡಬಹುದು. ಈಗಾಗಲೇ ರಾಜ್ಯದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಎರಡು ಎನ್​ಡಿಆರ್​ಎಫ್ ತಂಡಗಳು ಬಂದಿವೆ. ದಕ್ಷಿಣ ಕನ್ನಡ, ಕೊಡಗಿನಲ್ಲಿ ಒಂದೊಂದು ತಂಡ ಇರಲಿವೆ. ಇವುಗಳ ಜತೆಗೆ ನಮ್ಮ ಎಸ್​ಡಿಆರ್​ಎಫ್ ತಂಡ ಸೇರಲಿದೆ. ಮೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಯಾವೊಬ್ಬ ಅಧಿಕಾರಿಗೂ ರಜೆಯಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅಲರ್ಟ್ ಘೋಷಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮೂರು ಜಿಲ್ಲೆಗಳಲ್ಲಿ ಚಂಡಮಾರುತ ಬರಲಿದೆ. ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿಗೂ ಇದರ ಎಫೆಕ್ಟ್ ಆಗಲಿದೆ. ಕಂದಾಯ ಇಲಾಖೆ ಈಗಾಗಲೇ ಗಮನಹರಿಸಿದೆ. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್​ ಸಹಾಯದಿಂದ ಈ ಪರಿಸ್ಥಿತಿ ನಿಭಾಯಿಸಲು ಕಂದಾಯ ಇಲಾಖೆ ಸನ್ನದ್ಧವಾಗಿದೆ ಎಂದರು.

ಜನರಿಗೆ ಎಚ್ಚರಿಸುವ ಆಧುನಿಕ ಸೈರನ್ ವ್ಯವಸ್ಥೆಯಿದೆ, ಅಗತ್ಯ ಸಲಕರಣೆಗಳನ್ನ ಈಗಾಗಲೇ ಸಿದ್ಧಮಾಡಿಕೊಂಡಿದ್ದೇವೆ, ಜನರನ್ನು ಸಾಗಿಸಲು ಬಸ್, ಲಾರಿ, ಜೀಪ್​​ಗಳನ್ನು ರೆಡಿ ಮಾಡಿಕೊಂಡಿದ್ದೇವೆ. 15 ಕೋಟಿ ರೂ.ವೆಚ್ಚದಲ್ಲಿ ಸಲಕರಣೆ ರೆಡಿ ಮಾಡಿಕೊಂಡಿದ್ದೇವೆ. 436 ಎಸ್​ಡಿಆರ್​ಎಫ್ ಸಿಬ್ಬಂದಿಯಿದ್ದಾರೆ. ಬೆಂಗಳೂರು, ಕಲಬುರಗಿ ಟೀಂಗಳನ್ನು ಉಡುಪಿಗೆ ಕಳಿಸುತ್ತಿದ್ದೇವೆ. ಅಗ್ನಿಶಾಮಕ, ಪೊಲೀಸ್, ಕೋಸ್ಟಲ್ ಗಾರ್ಡ್ ಸೇರಿ 1 ಸಾವಿರ ರಕ್ಷಣಾ ಸಿಬ್ಬಂದಿ ಇದ್ದಾರೆ ಎಂದರು.

ಉಡುಪಿಗೆ 23 ಕೋಟಿ, ಉತ್ತರ ಕನ್ನಡಕ್ಕೆ 60 ಕೋಟಿ, ದಕ್ಷಿಣ ಕನ್ನಡಕ್ಕೆ 12 ಕೋಟಿ ಹಣ ಮೀಸಲಿಡಲಾಗಿದೆ. ಉಡುಪಿ ಭಾಗದಲ್ಲಿ ಕಡಲ ಕೊರೆತ ಉಂಟಾಗುವ ಸಾಧ್ಯತೆಯಿದೆ ಎಂದರು.

ABOUT THE AUTHOR

...view details