ಬೆಂಗಳೂರು : ಸ್ವಿಗ್ಗಿ, ಜೊಮಾಟೊ, ಅಮೆಜಾನ್ ಸೇರಿ ಇ-ಕಾರ್ಮಸ್ ಸಂಸ್ಥೆಗಳಲ್ಲಿ ಪೂರ್ಣ ಹಾಗೂ ಅರೆಕಾಲಿಕ ನೌಕರರಾಗಿ ಕೆಲಸ ಮಾಡುತ್ತಿರುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು 2 ಲಕ್ಷ ಜೀವವಿಮೆ ಹಾಗೂ 2 ಲಕ್ಷ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಮೂಲಕ ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ Gig workers ನ ಸಾವಿರಾರು ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅಲ್ಲದೇ ಜೀವವಿಮೆ ಹಾಗು ಅಪಘಾತ ವಿಮೆ ಸೌಲಭ್ಯಗಳಿಗೆ ಸರ್ಕಾರವೇ ವಿಮಾ ಕಂತು ಭರಿಸಲಿದೆ. ಕಾರ್ಖಾನೆ, ಬಾಯ್ಲರುಗಳು ಹಾಗೂ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ವ್ಯವಹಾರ ಸರಳೀಕರಣಗೊಳಿಸಲು ಎಲ್ಲ ಸೇವೆಗಳು ಆನ್ಲೈನ್ ಮೂಲಕ ಒದಗಿಸಲು ಮುಂದಾಗಿದೆ.
ಆರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಒಟ್ಟು 35 ಬೆಡ್ಗಳ ಸಾಮರ್ಥ್ಯದ ಐಸಿಯು ನಿರ್ಮಾಣಕ್ಕೆ 13 ಕೋಟಿ ವೆಚ್ಚದಲ್ಲಿ, ಆರು ಆಸ್ಪತ್ರೆಗಳಲ್ಲಿ 25 ಡಯಾಲಿಸಿಸ್ ಘಟಕ ನಿರ್ಮಾಣಕ್ಕೆ ಐದು ಕೋಟಿ ಮೀಸಲಿರಿಸಿದೆ. ಎರಡು ಆಸ್ಪತ್ರೆಗಳಲ್ಲಿ ಹೊಸ ಲೆವೆಲ್ ನ ಟ್ರಾಮಾ ಕೇರ್ ಸೆಂಟರ್ ಗಳನ್ನ 24 ಕೋಟಿ ರೂ ವೆಚ್ಚದಲ್ಲಿ, ನಾಲ್ಕು ಆಸ್ಪತ್ರೆಗಳಲ್ಲಿ ಮಾಡ್ಯುಲಾರ್ ಆಪರೇಷನ್ ಥಿಯೇಟರ್ ಗಳ ನಿರ್ಮಾಣಕ್ಕೆ 8 ಕೋಟಿ, ರೋಗ ಪತ್ತೆ ಹಚ್ಚುವ ಕೇಂದ್ರಗಳ ಉನ್ನತೀಕರಣಕ್ಕಾಗಿ 35 ಕೋಟಿ ಸೇರಿ ಒಟ್ಟು 85 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ದಿಪಡಿಸುವುದಾಗಿ ಸರ್ಕಾರ ತಿಳಿಸಿದೆ. ಎಲ್ಲ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿ ಆರ್ಯುವೇದ, ಹೋಮಿಯೋಪಥಿ ಮತ್ತು ಯೋಗ ಕೇಂದ್ರಗಳು ಒಳಗೊಂಡ ಆಯುಷ್ ವಿಭಾಗವನ್ನ 3 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.
ಇದನ್ನೂ ಓದಿ:Karnataka Budget: ಪುನೀತ್ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವು ತಡೆಗಟ್ಟಲು ₹6 ಕೋಟಿ ಅನುದಾನ