ಕರ್ನಾಟಕ

karnataka

ETV Bharat / state

ಫೋನ್​ ಕದ್ದಾಲಿಕೆ ಪ್ರಕರಣ ಸಿಬಿಐಗೆ ಕೊಟ್ಟಿರುವ ಹಿಂದೆ ದ್ವೇಷದ ರಾಜಕಾರಣ ಇಲ್ಲ: ಅಶೋಕ್​​​ - ತಪ್ಪಿತಸ್ಥರ ವಿರುದ್ಧ ತನಿಖೆ

ಫೋನ್ ಕದ್ದಾಲಿಕೆ ಸುಳ್ಳಿನ ಕಂತೆ, ದ್ವೇಷದ ರಾಜಕಾರಣ ಅಂತ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದು ನನಗೆ ಆಶ್ಚರ್ಯ ಉಂಟುಮಾಡಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದರು.

ಮಾಜಿ ಡಿಸಿಎಂ ಆರ್ ಅಶೋಕ್

By

Published : Aug 18, 2019, 2:09 PM IST

ಬೆಂಗಳೂರು: ಫೋನ್ ಕದ್ದಾಲಿಕೆ ಸುಳ್ಳಿನ ಕಂತೆ, ದ್ವೇಷದ ರಾಜಕಾರಣ ಅಂತ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದು ನನಗೆ ಆಶ್ಚರ್ಯ ಉಂಟುಮಾಡಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದರು.

ಮಾಜಿ ಡಿಸಿಎಂ ಆರ್.ಅಶೋಕ್

ಇನ್ನೂ ತನಿಖೆಯೇ ಆಗಿಲ್ಲ. ಆಗಲೇ ದ್ವೇಷದ ರಾಜಕಾರಣ ಅಂದರೆ ಹೇಗೆ? ತನಿಖೆ ಆದ ಮೇಲೆ ಯಾರು ತಪ್ಪಿತಸ್ಥರೆಂದು ಗೊತ್ತಾಗುತ್ತೆ. ಮುಂದೆ ಮಾಡೋರಿಗೆ ಇದೊಂದು ಎಚ್ಚರಿಕೆ ಗಂಟೆ ಆಗುತ್ತೆ ಎಂದು ಮಾಜಿ ಡಿಸಿಎಂ ಡಾಲರ್ಸ್​ ಕಾಲೋನಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿಗೆ ಹೆದರುತ್ತಾರೆ ಅನ್ನೋ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತಾನಾಡಿದ ಅವರು, ಕಾಂಗ್ರೆಸ್​ನವರು ಒಂದು ವಂಶಕ್ಕೆ, ಒಂದು ಕುಟುಂಬಕ್ಕೆ ಹೆದರುತ್ತಾರೆ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಅವರಿಂದ ಪಾಠ ಕಲಿಯುವ ಅಗತ್ಯ ಇಲ್ಲ. ನಮಗೆ ಯಾವ ಟೈಮ್​ನಲ್ಲಿ ಏನ್ ಮಾಡ್ಬೇಕು ಗೊತ್ತಿದೆ ಎಂದು ಕಿಡಿಕಾರಿದರು.‌

ABOUT THE AUTHOR

...view details