ಬೆಂಗಳೂರು:ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯದ ಮೂಲಕ ಸಾಕಷ್ಟು ಸಂಘ ಸಂಸ್ಥೆಗಳು, ಕಂಪನಿಗಳು, ಗಣ್ಯರು, ಉದ್ಯಮಿಗಳು ದೇಣಿಗೆ ನೀಡಿ ನೆರವಾಗುತ್ತಿದ್ದಾರೆ. ಆದರೆ, ಚಿಣ್ಣರು ತಾವು ಕೂಡಿಟ್ಟ ಹಣವನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡುವ ಮೂಲಕ ವಿಶೇಷವಾಗಿ ರಾಜ್ಯದ ಗಮನ ಸೆಳೆದಿದ್ದಾರೆ.
ಕೂಡಿಟ್ಟ 25 ಸಾವಿರ ರೂ. ಸಿಎಂ ಪರಿಹಾರ ನಿಧಿಗೆ ನೀಡಿದ ಪುಟಾಣಿಗಳು
ಹಾವೇರಿ ಜಿಲ್ಲೆಯ ಮೂವರು ಪುಟ್ಟ ಪುಟ್ಟ ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಮನೆಯಲ್ಲಿ ಪಾಕೆಟ್ ಮನಿ ಮೂಲಕ ಹಲವು ವರ್ಷದಿಂದ ಕೂಡಿಟ್ಟಿದ್ದ 25 ಸಾವಿರ ರೂಪಾಯಿ ಹಣವನ್ನು ಪರಿಹಾರ ನಿಧಿಗೆ ನೀಡಿ ಜನರ ಮನಗೆದ್ದಿದ್ದಾರೆ.
ಹಾವೇರಿ ಜಿಲ್ಲೆಯ ಮೂವರು ಪುಟ್ಟ ಪುಟ್ಟ ವಿದ್ಯಾರ್ಥಿನಿಯರು ಇನ್ನು ಈಗಷ್ಟೇ ಶಾಲೆಯಂಗಳದಲ್ಲಿ ಹೆಜ್ಜೆ ಇಟ್ಟಿದ್ದಾರೆ, ಆಟವಾಡುವ ವಯಸ್ಸಿನ ಈ ಕಂದಮ್ಮಗಳು ಇದೀಗ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಹಾವೇರಿಯ ವಿದ್ಯಾರ್ಥಿನಿಯರಾದ ಅವನಿ, ಸನ್ನಿಧಿ ಹಾಗೂ ದೀಪ್ತಿ ತಾವು ಕಳೆದ 3 ವರ್ಷಗಳಿಂದ ಕೂಡಿಟ್ಟಿದ್ದ ಬರೋಬ್ಬರಿ 25 ಸಾವಿರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸರ್ಕಾರಕ್ಕೆ ನೆರವಾಗುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ. ಇನ್ನು ಈ ಅಪರೂಪದ ದೇಣಿಗೆಗೆ ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ.