ಕರ್ನಾಟಕ

karnataka

ETV Bharat / state

ಜಾತಿ ಜನಗಣತಿ ವರದಿ ಬಹಿರಂಗ ಪಡಿಸಿ, ಸದಾಶಿವ ಆಯೋಗ ವರದಿ ಜಾರಿಗೊಳಿಸಿ; ಆಂಜನೇಯ

ರಾಜ್ಯ ಸರ್ಕಾರ ಜಾತಿ ಜನಗಣತಿಯ ವರದಿ ಬಹಿರಂಗ ಪಡಿಸಬೇಕು, ಸದಾಶಿವ ಆಯೋಗ ವರದಿ ಜಾರಿಯಾಗಬೇಕು ಎಂದು ಮಾಜಿ ಸಚಿವ ಹೆಚ್. ಆಂಜನೇಯ ಒತ್ತಾಯಿಸಿದ್ದಾರೆ.

h anjaneya
ಮಾಜಿ ಸಚಿವ ಹೆಚ್. ಆಂಜನೇಯ

By

Published : Feb 18, 2021, 3:03 PM IST

ಬೆಂಗಳೂರು: ರಾಜ್ಯ ಸರ್ಕಾರ ಜಾತಿ ಜನಗಣತಿಯ ವರದಿ ಬಹಿರಂಗ ಪಡಿಸಬೇಕು, ಸದಾಶಿವ ಆಯೋಗ ವರದಿ ಜಾರಿಯಾಗಬೇಕು ಎಂದು ಮಾಜಿ ಸಚಿವ ಹೆಚ್. ಆಂಜನೇಯ ಒತ್ತಾಯಿಸಿದ್ದಾರೆ.

ಮಾಜಿ ಸಚಿವ ಹೆಚ್. ಆಂಜನೇಯ

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ಜಾತಿಯವರಿಗೂ ಶೇ 10 ರಷ್ಟು ಮೀಸಲಾತಿ ಜಾರಿಯ ಘೋಷಣೆ ಮಾಡಿದರು. ಯಾರ್ಯಾರು ಬಡವರಿದ್ದಾರೆ ಅವರಿಗೆ ಅನುಕೂಲ ಸಿಗಲಿ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ:ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಮುಂದುವರಿಕೆ: ತನ್ವೀರ್ ಸೇಠ್

ಈ ಮೂಲಕ ಎಡಗೈ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಬೇಕು. ಕಾಂತರಾಜು ವರದಿ ಹಾಗೂ ಸದಾಶಿವ ಆಯೋಗದ ವರದಿ ಎರಡೂ ಜಾರಿಯಾಗಬೇಕು. ಸದ್ಯಕ್ಕೆ ದಲಿತ ಸಮುದಾಯದ ಯಾವುದೇ ಸಮಾವೇಶ ಇಲ್ಲ, ಆ ಶಕ್ತಿ ನಮಗಿಲ್ಲ ಎಂದರು.

ABOUT THE AUTHOR

...view details