ಬೆಂಗಳೂರು:ಸೋಮವಾರದವರೆಗೆ ರೆಸಾರ್ಟ್ನಲ್ಲಿರುತ್ತೇವೆ. ಇನ್ನುಳಿದ ಜೆಡಿಎಸ್ ಶಾಸಕರು ಬಸ್ನಲ್ಲಿ ಬರುತ್ತಾರೆ. ಸಿಎಂ ಹೆಚ್ಡಿಕೆ ಕೂಡ ಇಂದು ರಾತ್ರಿ ರೆಸಾರ್ಟ್ಗೆ ಬರಲಿದ್ದಾರೆ. ಪ್ರಸಕ್ತ ಚಟುವಟಿಕೆಗಳನ್ನು ಸ್ವತಃ ಗಮನಿಸಿ ಸಿಎಂ ವಿಶ್ವಾಸಮತಕ್ಕೆ ಮುಂದಾಗಿದ್ದಾರೆ. ಇದು ಉತ್ತಮ ಬೆಳವಣಿಗೆ, ಇದನ್ನು ಸ್ವಾಗತಿಸುತ್ತೇನೆ. ರೀವರ್ಸ್ ಆಪರೇಷನ್ ಎಲ್ಲ ಯಾವುದೂ ಇಲ್ಲ ಎಂದು ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ರು.
ರೀವರ್ಸ್ ಆಪರೇಷನ್ ಎಲ್ಲ ಏನೂ ಇಲ್ಲ.. ಸಚಿವ ಬಂಡೆಪ್ಪ ಕಾಶೆಂಪೂರ್ - ಸಚಿವ ಬಂಡೆಪ್ಪ ಕಾಶೆಂಪೂರ್
ರೀವರ್ಸ್ ಆಪರೇಷನ್ ಎಲ್ಲ ಏನೂ ಇಲ್ಲ. ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಜೆಡಿಎಸ್ ಶಾಸಕರು ಮತ್ತೆ ರೆಸಾರ್ಟ್ನತ್ತ ಆಗಮಿಸುತ್ತಿದ್ದೇವೆ ಅಷ್ಟೇ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.
ಸಚಿವ ಬಂಡೆಪ್ಪ ಕಾಶೆಂಪೂರ್
ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಜೆಡಿಎಸ್ ಶಾಸಕರು ಮತ್ತೆ ರೆಸಾರ್ಟ್ನತ್ತ ಆಗಮಿಸುತ್ತಿದ್ದು, ಬಂಡೆಪ್ಪ ಕಾಶೆಂಪೂರ್, ಸಾ ರಾ ಮಹೇಶ್ ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್ಗೆ ಆಗಮಿಸಿದ್ದಾರೆ.