ಕರ್ನಾಟಕ

karnataka

ETV Bharat / state

CRPFನಲ್ಲಿದ್ದಾಗ ಸೇನಾಧಿಕಾರಿ ಮಗಳ ಮೇಲೆ ರೇಪ್ ಅಟೆಂಪ್ಟ್.. ಸಿಕ್ಕಿಬಿದ್ದಾಗೆಲ್ಲ ಮಹಿಳೆಯರ ಒಳ ಉಡುಪಿನಲ್ಲಿರ್ತಿದ್ದ ಉಮೇಶ್ ರೆಡ್ಡಿ.. - ವಿಕೃತಕಾಮಿ ಉಮೇಶ್ ರೆಡ್ಡಿ ಹಿನ್ನೆಲೆ

ಚಿತ್ರದುರ್ಗ ಮೂಲದ ಉಮೇಶ್‌ ರೆಡ್ಡಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ ಆಯ್ಕೆಯಾಗಿದ್ದ. ಈತನನ್ನು ಜಮ್ಮು-ಕಾಶ್ಮೀರದಲ್ಲಿ ಸೇನಾಧಿಕಾರಿಯೊಬ್ಬರ ಮನೆಗೆ ಕಾವಲಿಗೆ ನಿಯೋಜಿಸಲಾಗಿತ್ತು. ಈ ವೇಳೆ ಮನೆಯಲ್ಲಿರುವ ಸೇನಾಧಿಕಾರಿಯ ಮಗಳನ್ನೇ ಅತ್ಯಾಚಾರ ಮಾಡಲು ಯತ್ನಿಸಿ ಚಿತ್ರದುರ್ಗಕ್ಕೆ ಪರಾರಿಯಾಗಿದ್ದ. ನಂತರ 1996ರಲ್ಲಿ ತನ್ನ ಹಿನ್ನೆಲೆ ಮರೆಮಾಚಿ, ಜಿಲ್ಲಾ ಪೊಲೀಸ್‌ ಶಸಸ್ತ್ರ ಪಡೆಗೂ ನೇಮಕಗೊಳ್ಳುವಲ್ಲಿ ಉಮೇಶ್‌ ರೆಡ್ಡಿ ಯಶಸ್ವಿಯಾಗಿದ್ದ..

ಉಮೇಶ್ ರೆಡ್ಡಿ
ಉಮೇಶ್ ರೆಡ್ಡಿ

By

Published : Sep 29, 2021, 5:09 PM IST

Updated : Sep 30, 2021, 2:42 PM IST

ಬೆಂಗಳೂರು :ವಿಕೃತಕಾಮಿ, ಸರಣಿ ಹಂತಕ ಉಮೇಶ್​ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ. 1998ರಲ್ಲಿ ಬೆಂಗಳೂರಿ‌ನ ಪೀಣ್ಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ‌ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿಗೆ 2006ರಲ್ಲಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.

ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲು ಹೈಕೋರ್ಟ್​ಗೆ ಉಮೇಶ್ ರೆಡ್ಡಿ ತಮ್ಮ ವಕೀಲ ಬಿ ಎನ್ ಜಗದೀಶ್ ಮೂಲಕ ಅರ್ಜಿ ಸಲ್ಲಿಸಿದ್ದ. ಆದರೆ, ನ್ಯಾ.ಅರವಿಂದ್ ಕುಮಾರ್ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಹೈಕೋರ್ಟ್‌ ಪೀಠ ಮಹತ್ವದ ಆದೇಶ ನೀಡಿದ್ದು, ಸರಣಿ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.

ಉಮೇಶ್​​ರೆಡ್ಡಿ ಪ್ರಕರಣದ ಹಿಸ್ಟರಿ :

ಇಸವಿ: 2006, ಅಕ್ಟೋಬರ್ 26 ಶಿಕ್ಷೆ: ಮರಣದಂಡನೆ, ದಂಡ : ರೂ. 25,000 ಕೋರ್ಟ್​​​: ಬೆಂಗಳೂರು ನಗರ ತ್ವರಿತ ನ್ಯಾಯಾಲಯ

2. ಇಸವಿ: 2007, ಅಕ್ಟೋಬರ್ 7 ಶಿಕ್ಷೆ: ಮರಣ ದಂಡನೆ

ಬೆಂಗಳೂರು ನಗರ ತ್ವರಿತ ನ್ಯಾಯಾಲಯವು 26ನೇ ಅಕ್ಟೋಬರ್, 2006ರಂದು ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಇತರ 9 ಪ್ರಕರಣಗಳಲ್ಲಿ ಮರಣದಂಡನೆ, 25,000 ರೂ. ದಂಡ ವಿಧಿಸಿತ್ತು. ತನ್ನ ತಾಯಿಯ ಆರೋಗ್ಯ ನೋಡಿಕೊಳ್ಳುವ ಹೊಣೆ ತನ್ನ ಮೇಲಿರುವುದರಿಂದ ಅನುಕಂಪ ತೋರುವಂತೆ ರೆಡ್ಡಿ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ, ನ್ಯಾಯಮೂರ್ತಿ ಕೆ. ಸುಕನ್ಯ ಅವರು ಈ ಮನವಿ ತಿರಸ್ಕರಿಸಿದ್ದರು.

ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. 2007ರ ಅ.4ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ ಜಿ ಸಭಾಹಿತ್ ಮರಣ ದಂಡನೆ ಶಿಕ್ಷೆ ಎತ್ತಿ ಹಿಡಿದಿದ್ದರು. ಆದರೆ, ನ್ಯಾಯಮೂರ್ತಿ ರವಿ ಬಿ. ನಾಯಕ್ ಜೀವಾವಧಿ ಶಿಕ್ಷೆ ತೀರ್ಪು ನೀಡಿದ್ದರು. ಈ ಬಗ್ಗೆ ಒಮ್ಮತದ ತೀರ್ಪಿಗಾಗಿ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಅವರನ್ನು ನೇಮಕ ಮಾಡಲಾಗಿತ್ತು.

2009ರ ಅ.18ರಂದು ನ್ಯಾ. ಬನ್ನೂರುಮಠ ಅವರು ಗಲ್ಲು ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದರು. 2011ರ ಫೆ.1ರಂದು ಸುಪ್ರಿಂಕೋರ್ಟ್ ಸಹ ಮರಣ ದಂಡನೆ ಎತ್ತಿ ಹಿಡಿದಿತ್ತು. ರಾಜ್ಯ ಸರ್ಕಾರದಿಂದ ಕ್ಷಮಾದಾನ ನಿರಾಕರಿಸಲ್ಪಟ್ಟ ನಂತರ ರೆಡ್ಡಿ ರಾಷ್ಟ್ರಪತಿಗಳ ಮೊರೆ ಹೋಗಿದ್ದ. 2013ರ ಮೇ 12ರಂದು ರಾಷ್ಟ್ರಪತಿಯವರು ಸಹ ರೆಡ್ಡಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು.

ವಿಕೃತಕಾಮಿ ಉಮೇಶ್ ರೆಡ್ಡಿ.. ಈ ಹೆಸರು ಕೇಳಿದರೆ ಇಡೀ ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳುತ್ತಿತ್ತು. ಸರಣಿ ರೇಪಿಸ್ಟ್ ಮತ್ತು ಕಿಲ್ಲರ್, ಇವನ ಕ್ರೌರ್ಯಕ್ಕೆ 20 ಮಹಿಳೆಯರು ಬಲಿಯಾಗಿದ್ದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಈತ ತನ್ನ ರಾಕ್ಷಸಿ ಕೃತ್ಯ ಮೆರೆದಿದ್ದನು. ತಾನು 18 ಕೊಲೆಗಳನ್ನು ಮಾಡಿರುವುದಾಗಿ ಸ್ವತಃ ರೆಡ್ಡಿಯೇ ಒಪ್ಪಿಕೊಂಡಿದ್ದ. 9 ಪ್ರಕರಣಗಳಲ್ಲಿ ಆತ ಶಿಕ್ಷೆಗೆ ಒಳಗಾಗಿದ್ದ. ವಿಕೃತ ಕಾಮಿಯ ಕಾಮತೃಷೆಗೆ ಒಳಗಾದ ಇನ್ನೂ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದೇ ಇಲ್ಲ.

ವಿಕೃತ ಕೃತ್ಯಗಳಿಗೆ ಕುಖ್ಯಾತಿ :ಸಾಮಾನ್ಯವಾಗಿ ಮನೆಯಲ್ಲಿ ಪುರುಷರು ಇಲ್ಲದಿರುವ ವೇಳೆಯನ್ನೇ (ಬೆ.11ರಿಂದ ಮಧ್ಯಾಹ್ನ 3ಗಂಟೆ) ಉಮೇಶ್‌ ರೆಡ್ಡಿ ಅಪರಾಧ ಕೃತ್ಯ ಎಸಗಲು ಆಯ್ಕೆ ಮಾಡಿಕೊಳ್ಳುತ್ತಿದ್ದ. ನೀರು ಅಥವಾ ವಿಳಾಸ ಕೇಳುವ ನೆಪದಲ್ಲಿ ಮನೆಗೆ ನುಗ್ಗುತ್ತಿದ್ದ ರೆಡ್ಡಿ, ಚಾಕು ತೋರಿಸಿ ಉಡುಪುಗಳನ್ನು ಕಳಚುವಂತೆ ಮಹಿಳೆಯರನ್ನು ಬಲವಂತ ಮಾಡುತ್ತಿದ್ದ.

ನಂತರ ಅವರ ಕತ್ತು ಕೊಯ್ದು ಕೊಲೆ ಮಾಡುತ್ತಿದ್ದ. ಮಹಿಳೆಯರು ಪ್ರಜ್ಞಾಹೀನರಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಬಳಿಕ ಚಿನ್ನಾಭರಣ ಹಾಗೂ ಮಹಿಳೆಯರ ಒಳ ಉಡುಪುಗಳನ್ನು ಹೊತ್ತು ಪರಾರಿಯಾಗುತ್ತಿದ್ದ. ಬಹುತೇಕ ಸಂದರ್ಭಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಉಮೇಶ್‌ ರೆಡ್ಡಿ ಮಹಿಳೆಯರ ಒಳ ಉಡುಪುಗಳನ್ನು ಧರಿಸಿರುತ್ತಿದ್ದ.

ಕಾನ್ ಸ್ಟೇಬಲ್‌ ಆಗಿದ್ದಾಗಲೇ ಕುಕೃತ್ಯ :ಚಿತ್ರದುರ್ಗ ಮೂಲದ ಉಮೇಶ್‌ ರೆಡ್ಡಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ ಆಯ್ಕೆಯಾಗಿದ್ದ. ಈತನನ್ನು ಜಮ್ಮು-ಕಾಶ್ಮೀರದಲ್ಲಿ ಸೇನಾಧಿಕಾರಿಯೊಬ್ಬರ ಮನೆಗೆ ಕಾವಲಿಗೆ ನಿಯೋಜಿಸಲಾಗಿತ್ತು. ಈ ವೇಳೆ ಮನೆಯಲ್ಲಿರುವ ಸೇನಾಧಿಕಾರಿಯ ಮಗಳನ್ನೇ ಅತ್ಯಾಚಾರ ಮಾಡಲು ಯತ್ನಿಸಿ ಚಿತ್ರದುರ್ಗಕ್ಕೆ ಪರಾರಿಯಾಗಿದ್ದ. ನಂತರ 1996ರಲ್ಲಿ ತನ್ನ ಹಿನ್ನೆಲೆ ಮರೆಮಾಚಿ, ಜಿಲ್ಲಾ ಪೊಲೀಸ್‌ ಶಸಸ್ತ್ರ ಪಡೆಗೂ ನೇಮಕಗೊಳ್ಳುವಲ್ಲಿ ಉಮೇಶ್‌ ರೆಡ್ಡಿ ಯಶಸ್ವಿಯಾಗಿದ್ದ.

Last Updated : Sep 30, 2021, 2:42 PM IST

ABOUT THE AUTHOR

...view details