ಬೆಂಗಳೂರು : ಕೊರೊನಾ ವಿರುದ್ಧ ಸಮರೋಪಾದಿಯಲ್ಲಿ ಹೋರಾಟ ಮಾಡುತ್ತಿರುವ ನಗರ ಪೊಲೀಸರಿಗೆ ಸಾರ್ವಜನಿಕರು ಹೂವಿನ ಸುರಿಮಳೆ ಸುರಿಸುವ ಮೂಲಕ ಗೌರವ ಸೂಚಿಸಿದ್ದಾರೆ.
ಕೊರೊನಾ ವಾರಿಯರ್ಸ್ಗಳಾಗಿರುವ ಪೊಲೀಸರಿಗೆ ಜನರಿಂದ ಹೂವಿನ ಸುರಿಮಳೆ.. - Flower down
ಇಂದು ಸಿದ್ದಾಪುರದ ಸೋಮೇಶ್ವರ ದೇವಾಲಯ ಬಳಿ ಪಥ ಸಂಚಲನ ನಡೆಸುವಾಗ ನಾಗರಿಕರು ತಮ್ಮ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಪೊಲೀಸರ ಮೇಲೆ ಹೂವಿನ ಸುರಿಮಳೆ ಸುರಿಸಿ ಗೌರವ ಸಲ್ಲಿಸಿದ್ದಾರೆ.
Corona Warriors
ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫೆಟ್ ನೇತೃತ್ವದ ಪೊಲೀಸರ ತಂಡ, ಇಂದು ಸಿದ್ದಾಪುರದ ಸೋಮೇಶ್ವರ ದೇವಾಲಯ ಬಳಿ ಪಥ ಸಂಚಲನ ನಡೆಸುವಾಗ ನಾಗರಿಕರು ತಮ್ಮ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಪೊಲೀಸರ ಮೇಲೆ ಹೂವಿನ ಸುರಿಮಳೆ ಸುರಿಸಿ ಗೌರವ ಸಲ್ಲಿಸಿದ್ದಾರೆ.
ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಜೀವನವನ್ನು ಪಣಕಿಟ್ಟು ಹಗಲು-ರಾತ್ರಿಯೆನ್ನದೇ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.