ಬೆಂಗಳೂರು: ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳಿಗೆ ತಮ್ಮ ಊರುಗಳಿಗೆ ಹೊಗುವ ಅವಕಾಶವನ್ನ ಕೇಂದ್ರ ಸರ್ಕಾರ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಇದನ್ನು ಪಾಲನೆ ಮಾಡುತ್ತಿದ್ದು, ಲಾಕ್ಡೌನ್ ವೇಳೆ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರನ್ನು ಅವರ ತವರಿಗೆ ತಲುಪಿಸಲು ಮುಂದಾಗಿದೆ.
ಬೇರೆ ರಾಜ್ಯದಲ್ಲಿ ಸಿಲುಕಿದವರನ್ನು ಕರೆಸಬೇಡಿ, ಸೋಂಕು ಇದ್ರೆ ಏನ್ ಕಥೆ: ಸುಂಕದಕಟ್ಟೆ ನಿವಾಸಿಗಳ ಆತಂಕ - ಲಾಕ್ಡೌನ್
ಸದ್ಯ ಸಿಲಿಕಾನ್ ಸಿಟಿಯ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಬಳಿ ಪ್ರವಾಸಿಗರು, ವಿದ್ಯಾರ್ಥಿಗಳು ಬೇರೆ ಬೇರೆ ಕಡೆ ತೆರಳಿದ ಸುಮಾರು 70 ಜನ ವಾಪಸ್ ಬರಲಿದ್ದು, ಇವರು ಬರುವ ವಿಚಾರ ತಿಳಿದು ರಾತ್ರಿ ಸಾರ್ವಜನಿಕರು ಗಲಾಟೆ ಮಾಡಿದ್ದಾರೆ.
ಸದ್ಯ ಸಿಲಿಕಾನ್ ಸಿಟಿಯ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಬಳಿ ಪ್ರವಾಸಿಗರು, ವಿದ್ಯಾರ್ಥಿಗಳು ಬೇರೆ ಬೇರೆ ಕಡೆ ತೆರಳಿದ ಸುಮಾರು 70 ಜನ ವಾಪಸ್ ಬರಲಿದ್ದು, ಇವರು ಬರುವ ವಿಚಾರ ತಿಳಿದು ರಾತ್ರಿ ಸಾರ್ವಜನಿಕರು ಗಲಾಟೆ ಮಾಡಿದ್ದಾರೆ. ಯಾರು ಇಲ್ಲಿಗೆ ಬರಬಾರದು, ಸದ್ಯ ಕೊರೊನಾ ಬೇರೆ ರಾಜ್ಯಗಳಲ್ಲಿ ತಾಂಡವ ಆಡುತ್ತಿದೆ. ಅವರಿಗೆ ಕೊರೊನಾ ಸೊಂಕು ಇದ್ರೆ ನಮಗೆ ಬರುತ್ತೆ , ಹೀಗಾಗಿ ಯಾರೂ ಬರಬಾರದೆಂದು ಗಲಾಟೆ ಮಾಡಿ ತಿರುಗಿಬಿದ್ದಿದ್ದಾರೆ .
ಇನ್ನು ವಿಚಾರ ತಿಳಿದು ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ದೌಡಯಿಸಿ ಸಾರ್ವಜನಿಕರ ಮನವೊಲಿಸಿದ್ದಾರೆ. ಇಂದು ಸುಮಾರು 50-60 ಜನ ಸಿಟಿಗೆ ಬರುವ ಹಿನ್ನೆಲೆ ಪೊಲೀಸರು ಭದ್ರತೆ ವಹಿಸಿದ್ದು, ಬರುವ ವಲಸಿಗರನ್ನ ಬಿಬಿಎಂಪಿ ಆರೋಗ್ಯಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ಕ್ವಾರಂಟೈನ್ ಮಾಡಲಿದ್ದಾರೆ.