ಬೆಂಗಳೂರು:ರಾಜಧಾನಿಗೆ ಅಗತ್ಯ ಸೇವೆಗಳನ್ನು ನೀಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಎಲ್ಲಾ ಸಮಯದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಸಂಜೆ ಮೂರರಿಂದ ಐದು ಗಂಟೆಯವರೆಗೆ ಮಾತ್ರ ಪ್ರವೇಶಿಸಬಹುದು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಕೊರೊನಾ ಭೀತಿ: ಸಂಜೆ 3 ಗಂಟೆಯವರೆಗೆ ಸಾರ್ವಜನಿಕರಿಗೆ ಬಿಬಿಎಂಪಿ ಕಚೇರಿ ಪ್ರವೇಶಕ್ಕೆ ನಿರ್ಬಂಧ! - BBMP until three o'clock in the evening
ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಸಾರ್ವಜನಿಕರು ಸಂಜೆ ಮೂರರಿಂದ ಐದು ಗಂಟೆಯವರೆಗೆ ಮಾತ್ರ ಪ್ರವೇಶಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
ಬಿಬಿಎಂಪಿಗೆ ಪ್ರವೇಶವಿಲ್ಲ
ಕೇಂದ್ರ ಕಚೇರಿಯಲ್ಲಿ ಹೆಚ್ಚಿನ ಜನಜಂಗುಳಿ ತಡೆಯುವ ನಿಟ್ಟಿನಲ್ಲಿ ಸಂಜೆ ಎರಡು ಗಂಟೆ ಅವಧಿಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದ ಪ್ರತಿನಿಧಿಗಳನ್ನು ಹೊರತುಪಡಿಸಿ ಇನ್ನುಳಿದ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ ವಿಧಾನಸೌಧ ಹಾಗೂ ಬೇರೆ ಖಾಸಗಿ ಜಾಗಗಳಲ್ಲಿ ಕೊರೊನಾ ವೈರಸ್ ಸೋಂಕನ್ನು ಪತ್ತೆ ಹಚ್ಚುವ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಿದಂತೆ ಬಿಬಿಎಂಪಿಯಲ್ಲೂ ಅಳವಡಿಸಬೇಕೆಂದು ಪ್ರತಿಪಕ್ಷ ನಾಯಕ ವಾಜಿದ್ ಪತ್ರ ಬರೆದಿದ್ದಾರೆ.