ಕರ್ನಾಟಕ

karnataka

ETV Bharat / state

ಹೇಳತೀರದು ನಿವೃತ್ತಿಯಂಚಿನಲ್ಲಿರುವ ಶಿಕ್ಷಕರ ಸಮಸ್ಯೆ: ಪರಿಷತ್​ ಸದಸ್ಯರ ಎದುರು ಗೋಳುತೋಡಿಕೊಂಡ ಟೀಚರ್ಸ್​​ - ಇತ್ತೀಚಿನ ಬೆಂಗಳೂರಿನ ಸುದ್ದಿ

ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಶಿಕ್ಷಕರು ಗೋಳಾಡಿಕೊಂಡರೂ ಸಹ ಅದ್ಯಾಕೋ ಶಿಕ್ಷಣ ಸಚಿವರು ಈ ಶೈಕ್ಷಣಿಕ ವರ್ಷ ಕಳೆದು ಹೋಗಲಿಯೆಂದು ಹೇಳಿ ಹಿಂದೆ ಸರಿದಿದ್ದಾರೆ. ಈ ಸಂಬಂಧ ಕೆಲ ಶಿಕ್ಷಕರು ಇಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಹೇಳತೀರದು ನಿವೃತ್ತಿಯಂಚಿನಲ್ಲಿರುವ ಶಿಕ್ಷಕರ ಸಮಸ್ಯೆ

By

Published : Sep 28, 2019, 11:26 PM IST

ಬೆಂಗಳೂರು:ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿದೆಯೆಂದು ಶಿಕ್ಷಕರು ಗೋಳಾಡಿಕೊಂಡರೂ ಸಹ ಅದ್ಯಾಕೋ ಶಿಕ್ಷಣ ಸಚಿವರು ಈ ಶೈಕ್ಷಣಿಕ ವರ್ಷ ಕಳೆದ ನಂತರ ನೊಡೋಣವೆಂದು ಹೇಳಿದ್ದಾರೆ.

ಹೇಳತೀರದು ನಿವೃತ್ತಿಯಂಚಿನಲ್ಲಿರುವ ಶಿಕ್ಷಕರ ಸಮಸ್ಯೆ

ಮೂರು ದಶಕಗಳ ಕಾಲ ಉತ್ತಮ ವಿದ್ಯಾರ್ಥಿಗಳನ್ನ ಕೊಡುಗೆ ಕೊಟ್ಟವರಿಗೆ ಸರ್ಕಾರ ನಿವೃತ್ತಿಯ ಸಮಯದಲ್ಲಿ ಮಾಡಿದ ಕಡ್ಡಾಯ ವರ್ಗಾವಣೆಯ ಮೂಲಕ ಕಣ್ಣೀರುಡುವಂತೆ ಮಾಡಿದೆ. ಸರ್ಕಾರದ ಯಡವಟ್ಟುಗಳಿಗೆ ಈಗಲೂ ಶಿಕ್ಷಕರು ಪರಿತಪಿಸುವಂತಾಗಿದೆ. ನಿವೃತ್ತ ಸಮಯದಲ್ಲಿರುವ ನಮ್ಮನ್ನು ವರ್ಗಾವಣೆ ಮಾಡಿರುವುದು ಎಷ್ಟು ಸರಿ, ಅನಾರೋಗ್ಯದಿಂದ ಬಳಲುತ್ತಿರುವ ನಾವು ವರ್ಗಾವಣೆ ಆಗಿ ಹೋದರೆ ಯಾವ ರೀತಿ ಸೇವೆ ಒದಗಿಸಲು ಸಾಧ್ಯವೆಂದು ಕೆಲ ಶಿಕ್ಷಕರು ತಮ್ಮ ಅಳಲು ತೋಡಿಕೊಂಡರು.

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಪಡೆಯಲಾಗದ ಭಾಗಗಳಿಗೆ ವರ್ಗಾವಣೆ ಮಾಡಿರೋದನ್ನ ಮಾನವೀಯತೆ ದೃಷ್ಟಿಯಿಂದ ತಡೆಹಿಡಿಯಲಾಗಿದೆಯೆಂದು ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ. ಅಲ್ಲದೇ ವಗಾರ್ವಣೆ ಮೂಲಕ ಹೋದವರನ್ನು, ಇನ್ನೂ ನಿಯಮಾವಳಿಗಳನ್ನು ಬದಲಾಯಿಸಿ ಅವರನ್ನು ವಾಪಾಸ್ ಅದೇ ಸ್ಥಳಗಳಿಗೆ ನೇಮಕ ಮಾಡೋಣವೆಂದು ಶಿಕ್ಷಣ ಸಚಿವರು ಹೇಳಿದ್ದಾರೆಂದರು. ಇನ್ನೂ ಈ ಕಡ್ಡಾಯ ವರ್ಗಾವಣೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವ ಭರವಸೆಯನ್ನು ಶಿಕ್ಷಣ ಸಚಿವರು ನಿಡಿದ್ದಾರೆಂದು ಪುಟ್ಟಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details