ಕರ್ನಾಟಕ

karnataka

ETV Bharat / state

ಕೊರೊನಾ ತಡೆಗಟ್ಟಲು ವಿನಾಯಕನ ಮೊರೆ ಹೋದ ಕನ್ನಡಪರ ಹೋರಾಟಗಾರು - The pro-Kannada fighters

ಕೊರೊನಾ ವೈರಸ್ ಜನರಿಗೆ ಹರಡದಂತೆ ತಡೆಗಟ್ಟಲು ದಾರಿ ತೋರಪ್ಪ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ವಿಘ್ನ ನಿವಾರಕ ವರಸಿದ್ದಿ ವಿನಾಯಕನ ಮೊರೆ ಹೋಗಿದ್ದಾರೆ.

ಕನ್ನಡಪರ ಹೋರಾಟಗಾರು
ಕನ್ನಡಪರ ಹೋರಾಟಗಾರು

By

Published : Mar 18, 2020, 3:12 PM IST

ಬೆಂಗಳೂರು: ಮಾರಕ ಕೊರೊನಾ ವೈರಸ್​ಗೆ ಔಷಧಿ ಕಂಡು ಹಿಡಿಯಲು ದಾರಿ ತೋರಪ್ಪ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಇಂದು ನವರಂಗ್ ಸರ್ಕಲ್ ನಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಆಟೋ ಚಾಲಕರು , ಬಿಎಂಟಿಸಿ ಚಾಲಕರು ಹಾಗೂ ರಸ್ತೆ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಕೊರೊನಾದಿಂದ ಜನರು ಹೆದರುವ ಅವಶ್ಯಕತೆ ಇಲ್ಲ. ಸ್ವಚ್ಛತೆ ಕಾಪಾಡಿ ಎಂದು ಜನರಿಗೆ ಮನವಿ ಮಾಡಿದ್ರು.

ಕೊರೊನಾ ತಡೆಗಟ್ಟಲು ವಿನಾಯಕನ ಮೊರೆ ಹೋದ ಕನ್ನಡ ಪರ ಹೋರಾಟಗಾರು

ಬಳಿಕ ಮಾತನಾಡಿದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ರಾಜ್ಯದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಮುಂದೆ ಕರ್ನಾಟಕದಲ್ಲಿ ಯಾರಿಗೂ ಈ ವೈರಸ್ ಹರಡದಂತೆ ನೋಡಿಕೊಳ್ಳಲಿ ಎಂದು ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ಮಾಡಿಸಿದ್ದೇವೆ ಎಂದರು.

ಆಟೋ ಚಾಲಕರು, ಹೂವಿನ ವ್ಯಾಪಾರಿಗಳು ರಸ್ತೆ ಬದಿ ವ್ಯಾಪಾರ ಮಾಡ್ತಾರೆ. ಅವರಿಗೆ ಈ ವೈರಸ್ ಹರಡಬಾರು. ಜನರು ಮಾಸ್ಕ್ ಮೊರೆ ಹೋಗುತ್ತಿರುವುದನ್ನು ಬಂಡವಾಳ ಮಾಡಿಕೊಂಡು ಮೆಡಿಕಲ್ ಸ್ಟೋರ್​ನವರು 5 ರೂ. ಮಾಸ್ಕ್ ಅನ್ನು 50 ರೂ.ಗೆ ಮಾರುತ್ತಿದ್ದಾರೆ. ಇದಕ್ಕೆ ಕೂಡಲೇ ಸರ್ಕಾರ ಕಡಿವಾಣ ಹಾಕಬೇಕು ಎಂದು ಸಂಘಟನೆಯ ಸದಸ್ಯ ಭರತ್ ಶೆಟ್ಟಿ ಒತ್ತಾಯಿಸಿದರು.

ABOUT THE AUTHOR

...view details