ಬೆಂಗಳೂರು:73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ 11 ದಿನಗಳಿಂದ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.ನಿನ್ನೆ ಈ ಫ್ಲವರ್ ಶೋಗೆ ತೆರೆ ಬಿದ್ದಿದ್ದು, ಕೊನೆ ದಿನದ ಅಂದವನ್ನ ಕಣ್ತುಂಬಿಕೊಳ್ಳೋಕೆ ಲಾಲ್‌ಬಾಗ್‌ಗೆ ಜನಸಾಗರವೇ ಹರಿದು ಬಂದಿತ್ತು.
ಇದೇ ತಿಂಗಳ ಆಗಸ್ಟ್ 8 ರಿಂದ ಆರಂಭವಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ 11 ದಿನಗಳಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ಲವರ್ ಶೋ ಆಯೋಜಿಸಲಾಗಿತ್ತು. ಮೈಸೂರು ಜಯಚಾಮರಾಜೇಂದ್ರ ಒಡೆಯರ ಥೀಂ ಇಟ್ಟುಕೊಂಡು ಈ ಬಾರಿಯ ಫಲ-ಪುಷ್ಪ ಪ್ರದರ್ಶನ ನಡೆಸಿದ್ದು, ಭರ್ಜರಿ ರೆಸ್ಫಾನ್ಸ್ ಸಿಕ್ಕಿದೆ. ಭಾನುವಾರ ಸರ್ಕಾರಿ ರಜೆ ಹಾಗೂ ಫ್ಲವರ್ ಶೋನ ಕೊನೆ ದಿನವಾದ್ದರಿಂದ ಲಾಲ್‌ಬಾಗ್‌ಗೆ ರಾಜ್ಯದ ಹಲವು ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು.
ಬೆಂಗಳೂರಿನ ಹೆಮ್ಮೆ ಫ್ಲವರ್ ಶೋಗೆ ತೆರೆ ಸಿಲಿಕಾನ್ ಸಿಟಿಯಲ್ಲಿ ಹೈ-ಅಲರ್ಟ್ ಘೋಷಣೆಯಾಗಿರೋ ಹಿನ್ನೆಲೆ, ಲಾಲ್‌ಗಾಗ್‌ನಲ್ಲಿ ಪ್ರತಿಯೊಬ್ಬರನ್ನೂ ಮೆಟಲ್ ಡಿಟೆಕ್ಟರ್‌ನಿಂದ ಪರಿಶೀಲಿಸಿ, ಪ್ರವಾಸಿಗರ ಬ್ಯಾಗ್‌ಗಳನ್ನ ಎರಡೆರಡು ಬಾರಿ ಚೆಕ್ ಮಾಡಿದ್ರು. ಇತ್ತ ಸಿನಿಮಾಗೇ ಹೋಗೊ ಮಂದಿಯೆಲ್ಲಾ ತಮ್ಮ ಫ್ಯಾಮಿಲಿಯೊಂದಿಗೆ ಸಸ್ಯಕಾಶಿಯತ್ತ ಹೆಜ್ಜೆ ಹಾಕಿ ಫ್ಲವರ್ ಶೋನಗೆ ಬಂದಿದ್ರು.
ಈ ಬಾರಿಯ ಫ್ಲವರ್ ಶೋಗೆ 5 ಲಕ್ಷ ಜನ ಆಗಮಿಸ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಲಾಲ್‌ಬಾಗ್ ತೋಟಗಾರಿಕೆ ಇಲಾಖೆಗೆ ಕೊಂಚ ನಿರಾಸೆಯಾಗಿದೆ. ಕಳೆದ 11 ದಿನಗಳಿಂದ ಈವರೆಗೆ 4 ಲಕ್ಷ ಪ್ರವಾಸಿಗರು ಮಾತ್ರ ಭೇಟಿ ಕೊಟ್ಟಿದ್ದಾರೆ. ಇನ್ನು ಈ ವೆದರ್‌ಗೆ ಹೂಗಳು ಸೆಟ್ ಆಗದ ಕಾರಣ ಬೇಗ ತಮ್ಮ ಸೌಂದರ್ಯವನ್ನ ಕಳೆದುಕೊಂಡಿದ್ದು, ಮುಂದಿನ ಬಾರಿ ಈ ಬಗ್ಗೆ ಹೆಚ್ಚಿನ ಗಮನ ಹರಿಸೋದಾಗಿ ಇಲಾಖೆಯ ಅಧಿಕಾರಿ ತಿಳಿಸಿದ್ರು. ಇನ್ನು ಈ ಬಾರಿ ಒಟ್ಟು ಸಂಗ್ರಹವಾದ ಹಣ 14.38 ಲಕ್ಷ ರೂ. ಆಗಿದೆ.