ಕರ್ನಾಟಕ

karnataka

ETV Bharat / state

ಸಂಪಂಗಿ ಕೆರೆಯಲ್ಲಿ ಹುಡುಗರ ಪುಂಡಾಟ: ಈಜು ಬಾರದ ಬಾಲಕನಿಗೆ ನೀರಲ್ಲಿ ಥಳಿತ! - ಸಂಪಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕರ ಪುಂಡಾಟ

ಸಿಲಿಕಾನ್ ಸಿಟಿಯಲ್ಲಿ ಹುಡುಗರು ಪುಂಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಈಜು ಬಾರದ ಬಾಲಕನಿಗೆ ಹಿಗ್ಗಾ ಮುಗ್ಗ ಥಳಿಸಲಾಗಿದೆ. ನಗರದ ಸಂಪಂಗಿ ಕೆರೆಯಲ್ಲಿ ಈ ಘಟನೆ ನಡೆದಿದ್ದು,ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಯುವಕರ ಪುಂಡಾಟ: ವಿಡಿಯೋ ವೈರಲ್

By

Published : Nov 21, 2019, 12:28 PM IST

ಬೆಂಗಳೂರು: ಈಜು ಬಾರದ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಗರದ ಸಂಪಂಗಿ ಕೆರೆಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಹರ್ಷವರ್ಧನ್ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ, ಚರಣ್, ಕುಳ್ಳಿ ಹಾಗೂ ಸಂದೀಪ್ ಈಜಾಡಲು ಸಂಪಗಿ ಕೆರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಎಲ್ಲರೂ ಈಜಾಡುವಾಗ, ಹರ್ಷವರ್ಧನ್ ಈಜು ಬಾರದ ಕಾರಣ ದಡದಲ್ಲಿ ನಿಂತಿದ್ದಾನೆ. ಈ ವೇಳೆ ಬಾಲಕನನ್ನು ಇತರರು ಬಲವಂತವಾಗಿ ನೀರಿಗೆಳೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಗೊಳಗಾದ ಬಾಲಕನ ಬಲಗಣ್ಣಿಗೆ ಗಾಯವಾಗಿದ್ದು ರಕ್ತ ಹೆಪ್ಪುಗಟ್ಟಿದೆ. ನಂತರದಲ್ಲಿ ಆತನನ್ನು ನೀರಿನಲ್ಲಿ ಮುಳುಗಿಸಿ ಈಜುವಂತೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಲಾಗಿದೆ.

ಬಾಲಕನ ಪೋಷಕರು ಈ ಕುರಿತು ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂಪಂಗಿ ಕೆರೆಯಲ್ಲಿ ಹುಡುಗರ ಪುಂಡಾಟ, ಬಾಲಕನ ಮೇಲೆ ದೌರ್ಜನ್ಯ: ವಿಡಿಯೋ ವೈರಲ್

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಚೇತನ್ ಸಿಂಗ್ ರಾಥೋರ್, ಬಾಲಕನಿಗೆ ಕೆರೆಯಲ್ಲಿ ಹಿಂಸೆ ಕೊಟ್ಟ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರು ಜನ ಹುಡುಗರಲ್ಲಿ ಐವರು ಅಪ್ರಾಪ್ತರಾಗಿದ್ದು, ಐದು ಜನರನ್ನು ಜ್ಯೂವೆನಲ್ ಕೋರ್ಟ್​ಗೆ ಹಾಜರುಪಡಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಸಂದೀಪ್ ಎಂಬಾತ ಸ್ಟೋರ್ ಕೀಪರ್ ಕೆಲಸ ಮಾಡ್ತಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details