ಬೆಂಗಳೂರು :ವಿಶ್ವದಾದ್ಯಂತ ಕೊರೊನಾ ಸೃಷ್ಟಿಸಿರುವ ಭೀತಿಯಿಂದ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಕ್ರಮಗಳನ್ನು ಹೊಂದಲಾಗಿದೆ. ವಿಧಾನ ಸಭೆಯ ಒಳಗೂ ಮತ್ತು ಹೊರಗೂ ಕೊರೊನಾ ಚರ್ಚೆ ಏರ್ಪಟ್ಟಿದ್ದು, ರಾಜಕೀಯ ನಾಯಕರಿಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಯಿತು.
ಕಲಾಪಕ್ಕೂ ತಟ್ಟಿದ ಕೊರೊನಾ ಬಿಸಿ.. ಸ್ಯಾನಿಟೈಸರ್ ಬಳಸಿದ ನಾಯಕರು..
ವಿಶ್ವದಾದ್ಯಂತ ಕೊರೊನಾ ಸೃಷ್ಟಿಸಿರುವ ಭೀತಿಯಿಂದ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಕ್ರಮಗಳನ್ನು ಹೊಂದಲಾಗಿದೆ.
ಸ್ಯಾನಿಟೈಸರ್ ಬಳಸಿದ ನಾಯಕರು
ಕೈಗಳನ್ನು ಶುಚಿಯಾಗಿಟ್ಟುಕೊಳ್ಳಲು ಪ್ರತಿಯೊಬ್ಬ ಶಾಸಕರೂ ಸ್ಯಾನಿಟೈಸರ್ನ ಬಳಸಿ ಸ್ವಚ್ಛ ಮಾಡಿಕೊಳ್ಳುತ್ತಿದ್ದ ದೃಶ್ಯ ವಿಧಾನಸಭೆಯ ಮೊಗಸಾಲೆಯಲ್ಲಿ ಕಂಡು ಬಂತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕ ಡಾ. ಶ್ರೀನಿವಾಸ್‌ಮೂರ್ತಿ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛ ಮಾಡಿಕೊಂಡರು.
ಛೀಮಾರಿ ಹಾಕಲ್ವ!?: ಕಲಾಪ ಆರಂಭವಾದರೂ ಆಡಳಿತ ಪಕ್ಷದ ನಾಯಕರು ಹಾಜರಾಗದ ಕಾರಣ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಇವರಿಗೆಲ್ಲ ಛೀಮಾರಿ ಹಾಕಲ್ಲವೇ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದರು. ಆಡಳಿತ ಪಕ್ಷದವರು ಸದನಕ್ಕೆ ಬೇಗ ಬರಬೇಕು ಎಂದರು.