ಬೆಂಗಳೂರು:ದಸರಾ ಮಹೋತ್ಸವ ನಿಮಿತ್ತ ಈಶ್ವರ, ಚಾಮುಂಡೇಶ್ವರಿ, ದತ್ತಾತ್ರೆಯ ದೇವರು, ಫಿರಂಗಿಗಳ ಮೆರವಣಿಗೆಗೆ ಬ್ರೇಕ್ ನೀಡಿದ್ದು, ಎರಡು ಕೋಮುಗಳ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿದೆ.
ದಸರಾ ಮಹೋತ್ಸವದ ಮೆರವಣಿಗೆಗೆ ಬ್ರೇಕ್: ಕೋಮುಗಳ ನಡುವೆ ವಾಗ್ವಾದ - ದಸರಾ ಮೆರವಣಿಗೆ
ಬೆಂಗಳೂರಿನ ಆರ್.ಟಿ.ನಗರದ ಬಳಿ ದಸರಾ ಮೆರವಣಿಗೆಗೆ ತಡೆ ನೀಡಿದ್ದರಿಂದ ಎರಡು ಕೋಮುಗಳ ನಡುವೆ ವಾಗ್ವಾದ ನಡೆದಿದೆ. ತಡವಾಗಿ ಆರಂಭವಾದ ದಸರಾ ಮೆರವಣಿಗೆ ಮುಂಜಾನೆವರೆಗೂ ನಡೆಯಿತು. ಬೆಳಗ್ಗೆ ನಮಾಜ್ ತೆರಳುವವರಿಗೆ ತೊಂದರೆಯಾಗದಂತೆ ಮೆರವಣಿಗೆ ತಡೆಯಲಾಗಿತ್ತು.
ದಸರಾ ಮೆರವಣಿಗೆಯಲ್ಲಿ ವಾಗ್ವಾದ
ದಸರಾ ಮೆರವಣಿಗೆ ಮಳೆಯ ಅಡ್ಡಿಯಿಂದಾಗಿ ವಿಳಂಬವಾಗಿದೆ. ಆರ್ಟಿ ನಗರದಿಂದ ಟಿವಿ ಟವರ್ವರೆಗೆ ಸಾಗಬೇಕಿದ್ದ ಮೆರವಣಿಗೆಯು 11 ಗಂಟೆ ನಂತರ ಪ್ರಾರಂಭವಾಗಬೇಕಿದ್ದರಿಂದ ಕಾರ್ಯಕ್ರಮ ತಡವಾಗಿದೆ. ಬೆಳಗಿನವರೆಗೆ ಮೆರವಣಿಗೆ ನಡೆದಿದ್ದು, ಬೆಳಗ್ಗೆ ನಮಾಜ್ಗೆ ಹೊರಟಿದ್ದವರಿಗೆ ತೊಂದರೆಯಾಗದಂತೆ ಪೊಲೀಸರು ಅರ್ಧ ಗಂಟೆ ತಡೆ ನೀಡಿದ್ದಾರೆ.
ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಸಂಚಾರಿ ವಿಭಾಗದ ಡಿಸಿಪಿ ಸಾ.ರಾ ಫಾತಿಮಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.