ಕರ್ನಾಟಕ

karnataka

ETV Bharat / state

ಮದುವೆಗೆ ತೆರಳಿದ್ದವರ ಮನೆಯಲ್ಲಿ ಕೈಚಳಕ.. ಸಂಬಂಧಿಕರ ಮನೆ ದೋಚಿದ್ದ ಆರೋಪಿಯ ಬಂಧನ - ತಿಲಕ್ ನಗರ ಠಾಣಾ ಪೊಲೀಸರು

ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

police arrested the thief  thief who had robbed a relative house  robbed a relative house in Bengaluru  ಮದುವೆಗೆ ತೆರಳಿದ್ದವರ ಮನೆಯಲ್ಲಿ ಕೈಚಳಕ  ಸಂಬಂಧಿಕರ ಮನೆ ದೋಚಿದ್ದ ಕಳ್ಳನ ಬಂಧನ  ಮನೆ ಕಳ್ಳತನ ಪ್ರಕರಣ  ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿರುವ ಘಟನೆ  ನಕಲಿ ಕೀ ಬಳಸಿ ಸಂಬಂಧಿಕರ ಮನೆ  ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ  ತಿಲಕ್ ನಗರ ಠಾಣಾ ಪೊಲೀಸರು  ಸಂಬಂಧಿಕರ ಮನೆಯಲ್ಲಿ ಕಳ್ಳತನ
ಮದುವೆಗೆ ತೆರಳಿದ್ದವರ ಮನೆಯಲ್ಲಿ ಕೈಚಳಕ

By ETV Bharat Karnataka Team

Published : Oct 3, 2023, 2:46 PM IST

ಮದುವೆಗೆ ತೆರಳಿದ್ದವರ ಮನೆಯಲ್ಲಿ ಕೈಚಳಕ

ಬೆಂಗಳೂರು : ನಕಲಿ ಕೀ ಬಳಸಿ ಸಂಬಂಧಿಕರ ಮನೆಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಆರೋಪಿಯನ್ನು ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್ (35) ಬಂಧಿತ ಆರೋಪಿ. ಬಂಧಿತನಿಂದ 1.10 ಕೋಟಿ ಮೌಲ್ಯದ 1.8ಕೆಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಸಂಬಂಧಿಕರ ಮನೆಯಲ್ಲಿ ಕಳ್ಳತನ:ದೂರುದಾರ ಷಹನವಾಜ್ ಗುಜರಿ ವ್ಯಾಪಾರಿಯಾಗಿದ್ದು, ತಿಲಕ್ ನಗರದ ಎಸ್.ಆರ್.ಕೆ ಗಾರ್ಡನ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಷಹನವಾಜ್ ಕುಟುಂಬಕ್ಕೆ ಸಂಬಂಧಿಯಾಗಿದ್ದ ಮೊಹಮ್ಮದ್ ರಫೀಕ್​ಗೆ ಆರಂಭದಿಂದಲೂ ಅವರ ಐಷಾರಾಮಿ ಜೀವನ ಶೈಲಿಯ ಬಗ್ಗೆ ಅಸೂಯೆ ಇತ್ತು. ಆಗಾಗ ಷಹನವಾಜ್ ಮನೆಗೆ ಬಂದು ಹೋಗುತ್ತಿದ್ದ ರಫೀಕ್, ಸಂದರ್ಭವೊಂದರಲ್ಲಿ ಮನೆಯ ಕೀ ಅಚ್ಚು ಪಡೆದುಕೊಂಡು‌ ಅದರ ನಕಲಿ ಸಿದ್ಧಪಡಿಸಿಕೊಂಡಿದ್ದ.

ಇತ್ತೀಚಿಗೆ ಷಹನವಾಜ್ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದ್ದುದರಿಂದ ಚಿನ್ನಾಭರಣ ಹಾಗೂ ನಗದು ತಂದಿಡಲಾಗಿತ್ತು. ಸೆಪ್ಟೆಂಬರ್ 23ರಂದು ಸಂಬಂಧಿಕರ ಮನೆಯಲ್ಲಿ ಮದುವೆ ನಿಮಿತ್ತ ಷಹನವಾಜ್ ಕುಟುಂಬ ರಾಮನಗರಕ್ಕೆ ತೆರಳಿತ್ತು. ಅದೇ ಸಂದರ್ಭವನ್ನು ಬಳಸಿಕೊಂಡಿದ್ದ ಆರೋಪಿ ಅವರ ಮನೆಗೆ ನುಗ್ಗಿ 2.5 ಕೆ‌ಜಿ ತೂಕದ ಚಿನ್ನಾಭರಣ, 8 ರಿಂದ 10 ಲಕ್ಷ ನಗದು ದೋಚಿ ಪರಾರಿಯಾಗಿದ್ದ. ಸೆಪ್ಟೆಂಬರ್ 25ರ ರಾತ್ರಿ ಷಹನವಾಜ್ ಕುಟುಂಬ ಮನೆಗೆ ಮರಳಿದಾಗ ಕಳ್ಳತನದ ಕೃತ್ಯ ಬಯಲಾಗಿತ್ತು. ತಕ್ಷಣ ಷಹನವಾಜ್ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆಗಿಳಿದಾಗ ಆರೋಪಿ ನಂಬರ್ ಪ್ಲೇಟ್ ಬದಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿರುವುದು ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಹೊರಟಾಗ ಆರೋಪಿ ಷಹನವಾಜ್ ಸಂಬಂಧಿಕನೇ ಎಂಬುದು ಬಯಲಾಗಿದೆ. ಕದ್ದ ಹಣದಲ್ಲಿ ಬಹುಪಾಲು ದುಡ್ಡನ್ನು ಆರೋಪಿ ತನ್ನ ಸಾಲಗಳನ್ನು ತೀರಿಸಲು ಬಳಸಿಕೊಂಡಿದ್ದು, ಸದ್ಯ ಆತನಿಂದ 1.8 ಕೆ.ಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ಮನೆಮಂದಿ ಕಟ್ಟಿಹಾಕಿ ದರೋಡೆ ಪ್ರಕರಣ: ಆರು ಆರೋಪಿಗಳ ಬಂಧನ

ABOUT THE AUTHOR

...view details