ಕರ್ನಾಟಕ

karnataka

ETV Bharat / state

ಪಿಂಕ್ ಬೇಬಿ ಯೋಜನೆ..18 ಮಕ್ಕಳಿಗೆ ತಲಾ 5 ಲಕ್ಷದ ಬಾಂಡ್ ವಿತರಣೆ..

2018-19ನೇ ಸಾಲಿನಲ್ಲಿ ಇಪ್ಪತ್ನಾಲ್ಕು ಆಸ್ಪತ್ರೆಯಲ್ಲೂ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಪಿಂಕ್ ಬೇಬಿ ಯೋಜನೆ ವಿಸ್ತರಿಸಲಾಗಿದೆ. ಬಿಬಿಎಂಪಿಯ ಎಲ್ಲಾ 24 ಹೆರಿಗೆ ಆಸ್ಪತ್ರೆಗಳಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ತಲಾ 5 ಲಕ್ಷದ ಬಾಂಡ್ ವಿತರಿಸಲಾಯಿತು.

the-pink-baby-project

By

Published : Aug 9, 2019, 9:26 AM IST

ಬೆಂಗಳೂರು: ಬಿಬಿಎಂಪಿಯ ಎಲ್ಲಾ 24 ಹೆರಿಗೆ ಆಸ್ಪತ್ರೆಗಳಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಪಿಂಕ್ ಬೇಬಿ ಯೋಜನೆಯಡಿಯಲ್ಲಿ ಗುರುವಾರದಂದು 18 ಮಕ್ಕಳಿಗೆ ತಲಾ 5 ಲಕ್ಷದ ಬಾಂಡ್ ವಿತರಿಸಲಾಯಿತು. 2018-19ನೇ ಸಾಲಿನಲ್ಲಿ ಇಪ್ಪತ್ನಾಲ್ಕು ಆಸ್ಪತ್ರೆಯಲ್ಲೂ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಪಿಂಕ್ ಬೇಬಿ ಯೋಜನೆ ವಿಸ್ತರಿಸಲಾಗಿದೆ.

ಬಿಬಿಎಂಪಿಯಿಂದ ಪಿಂಕ್ ಬೇಬಿ ಯೋಜನೆ ಜಾರಿ..

ಈ ಹಿಂದೆ 2018ನೇ ಸಾಲಿನಲ್ಲಿ ವರ್ಷದ ಮೊದಲನೇ ದಿನ ಹುಟ್ಟಿದ ಒಂದು ಹೆಣ್ಣು ಮಗುವಿಗೆ ಮಾತ್ರ ಐದು ಲಕ್ಷ ರೂಪಾಯಿಯ ಬಾಂಡ್ ನೀಡಲಾಗುತ್ತಿತ್ತು. ಆದರೆ, ಪಾಲಿಕೆಯ ಎಲ್ಲಾ ಆಸ್ಪತ್ರೆಗಳಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಸಿಗಬೇಕೆಂಬ ಕಾರಣಕ್ಕೆ ಒಟ್ಟು 120 ಲಕ್ಷ ರೂಪಾಯಿ ಯೋಜನೆಯಡಿ ಈ ಸೌಲಭ್ಯ ವಿಸ್ತರಿಸಲಾಗಿದೆ.

ಈ ಯೋಜನೆಯ ಉದ್ದೇಶ, ಹಣವನ್ನು ಮಗುವಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಐದು ಲಕ್ಷ ರೂಪಾಯಿಗೆ ಬರುವ ಬಡ್ಡಿ ಹಣದಲ್ಲಿ ವಿದ್ಯಾಭ್ಯಾಸ ಕೊಡಬಹುದು. ಅಲ್ಲದೆ ಮಗುವಿಗೆ 18 ವರ್ಷ ವಯಸ್ಸಾದಾಗ ಆ ಬಾಂಡ್ ಹಣ ಹೆತ್ತವರ ಅಕೌಂಟ್​ಗೆ ಕಳಿಸಲಾಗುತ್ತೆ. ಆ ಮೂಲಕ ಮಗುವಿನ ಉನ್ನತ ಶಿಕ್ಷಣಕ್ಕೆ ನೆರವಾಗಬಹುದಾಗಿದೆ. ಒಂದು ವೇಳೆ ಮಗುವಿಗೆ ಶಿಕ್ಷಣ ನೀಡದಿದ್ದರೆ ಆ ಬಾಂಡ್ ಹಣ ಪಾಲಿಕೆ ಅಕೌಂಟ್​ಗೆ ವಾಪಾಸ್ ಬರಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಮುಂದಿನ ವರ್ಷದಿಂದ ಮಹಾಲಕ್ಷ್ಮಿ ಯೋಜನೆ ಜಾರಿ
2019-20 ನೇ ಸಾಲಿನ ಬಜೆಟ್​ನಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೇಮಲತಾ ಗೋಪಾಲಯ್ಯ ಈ ಯೋಜನೆ ಬಜೆಟ್​ನಲ್ಲಿ ಘೋಷಿಸಿದ್ದರು. ಈ ಯೋಜನೆ ಪ್ರಕಾರ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಒಂದು ಲಕ್ಷ ರೂಪಾಯಿಯ ಬಾಂಡ್ ವಿತರಿಸುವುದಾಗಿದೆ. ಆದರೆ, ಸದ್ಯ ಬಜೆಟ್‌ನ ನೂತನ ಸಿಎಂ ತಡೆಹಿಡಿದಿರುವುದರಿಂದ ಈ ಯೋಜನೆ ಜಾರಿ ವಿಳಂಬವಾಗಲಿದೆ. ಮುಂದಿನ ಜನವರಿಯಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ABOUT THE AUTHOR

...view details